ಮುಂದುವರೆದ ವರುಣನ ಅಬ್ಬರ : ಕೊಡಗಿನ ಸಂತ್ರಸ್ತರಿಗೆ ನೆರವಿನ ಮಹಾಪೂರ…!

ಕೊಡಗು : ಭಾರೀ ಮಳೆಯಿಂದ ಜನರ ನೆರವಿಗೆ ಗಂಜಿ ಕೇಂದ್ರಗಳ ತೆರೆದಿದ್ದು,  ಕೊಡಗು ಜಿಲ್ಲೆಯಲ್ಲಿ ತೆರೆಯಲಾಗಿರುವ ಒಟ್ಟು 42 ಆಶ್ರಯ ಕೇಂದ್ರ ತೆರೆಯಲಾಗಿದ್ದು. ಕೊಡಗಿಗೆ ಹಲವಾರು ಜನ ಪರಿಹಾರ ನಿಧಿಯನ್ನು ಕಳುಹಿಸುತ್ತಿದ್ದಾರೆ. ಇನ್ನ ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದ ಕಾರಣ 21ವರೆಗೆ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಿದ್ದಾರೆ.

ಕೊಡಗಿನ 42 ಆಶ್ರಯ ಕೇಂದ್ರಗಳಲ್ಲಿ 5818 ಜನ ನೆಲೆಸಿದ್ದು,  ಇಲ್ಲಿಯವರಗೆ 15 ಮಂದಿ ಕಣ್ಮರೆಯಾಗಿದ್ದು, 7 ಮಂದಿಯ ಶವ ಸಿಕ್ಕಿದೆ ಎಂದು ತಿಳಿಸುಬಂದಿದೆ. ಕೊಡಗಿನಲ್ಲಿ ಮೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಹೆಚ್ಚು ಹಾನಿಯಾಗಿರುವ ಪ್ರದೇಶವೆಂದರೆ  ಮಕ್ಕಂದೂರು, ಜೋಡುಪಾಲ, ಮದೆನಾಡು, ಸೂರ್ಲಬ್ಬಿ, ಹಮ್ಮಿಯಾಲ, ಕಾಲೂರು, ಹಟ್ಟಿಕೊಳೆ, ಇಂದಿರಾನಗರ, ಎರಡನೆ ಮೊಣ್ಣಂಗೇರಿಯಲ್ಲಿ ಹೆಚ್ಚು ಹಾನಿಯಾಗಿದೆ.

ಕೇವಲ ಸಂಘ ಸಂಸ್ಥೆಗಳು ಮಾತ್ರವಲ್ಲದೆ ಶಾಲಾ- ಕಾಲೇಜು ವಿಧ್ಯಾರ್ಥಿಗಳು ಕೂಡಾ, ಪರಿಹಾರ ನಿಧಿ ಸಂಗ್ರಹಣೆಗೆ ಮುಂದಾಗಿದ್ರು. ನಗರದ ಜೋಗಿ ಮಟ್ಟಿ ರಸ್ತೆ ಬಿಸಿಎಂ ಹಾಸ್ಟೇಲ್ ವಿಧ್ಯಾರ್ಥಿನಿಯರು ಕೂಡಾ ನಗರದ ನಾನ ಕಡೆಗಳಲ್ಲಿ ಹುಂಡಿಗಳನ್ನ ಹಿಡಿದು ಪರಿಹಾರ ನಿಧಿ ಸಂಗ್ರಹಿಸಿದ್ರು. ಇನ್ನೂ ಭದ್ರಾ ಮೆಲ್ದಂಡೆ ಇಲಾಖೆಯ ಅಧಿಕಾರಿಗಳು ಕೂಡಾ ನೆರೆ ಸಂತ್ರಸ್ಥರಿಗೆ, ಹಣ್ಣು, ಹಾಲು, ಬ್ರೇಡ್ ಸೇರಿ ದಿನೋಪಯೋಗಿ ವಸ್ತುಗಳನ್ನ ಕೊಡಗಿಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದರು.

ಶಾಲಾ-ಕಾಲೇಜುಗಳಲ್ಲಿ ಪರಿಹಾರ ಕೇಂದ್ರ ತೆರೆದಿರುವ ಹಿನ್ನೆಲೆ  ಇಂದು ಮತ್ತು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಸಿ ಎಂದು  ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಬಾರೀ ಪ್ರಮಾಣದ ಗುಡ್ಡ ಕುಸಿತವಾಗಿರುವ ಹಿನ್ನೆಲೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಗುಡ್ಡ ಕುಸಿಯುತ್ತಿರುವುದರಿಂದ ರಸ್ತೆಯಲ್ಲಿನ‌ ಮಣ್ಣು ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಇಲ್ಲಿಯವರೆಗೆ ಅಧಿಕೃತವಾಗಿ ಸಹಾಯಕ್ಕಾಗಿ ಹಾತೊರೆಯುತ್ತಿದ್ದವರ ರಕ್ಷಣೆ ಮಾಡಲಾಗಿದೆ.

ಕೊಡಗು ಸಂತ್ರಸ್ತರಿಗೆ ಗಣಿನಾಡು ಬಳ್ಳಾರಿಯಲ್ಲಿ ನೆರವಿನ ಮಹಾಪೂರ ಮುಂದುವರೆದಿದೆ. ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ಈ ವೇಳೆ ಪಿಎಸ್ಐ ರಫೀಕ್ ಮಹಮ್ಮದ್ ಬಂದಿದ್ದ ಸಾರ್ವಜನಿಕರಿಗೆ ಕೊಡಗು ಜನರಿಗೆ ಸಹಾಯ ಮಾಡೋಣವೇ ಎಂದು ಕೇಳಿಕೊಂಡಾಗ ಜನರು ಒಂದೇ ಮಾತಿಗೆ ತಮ್ಮ ಕೈಲಾದ ಷ್ಟು ಸಹಾಯ ಮಾಡಿದ್ದಾರೆ. ಅಲ್ಲದೇ ಠಾಣೆಯಲ್ಲಿನ ಸಿಬ್ಬಂದಿ ಕೂಡ ಸಹಾಯ ಮಾಡಿದ್ದು, ಈಡಿ ತಂಡವೇ ಸಾರ್ವಜನಿಕಲ್ಲಿ ತೆರಳಿ ಸಹಾಯ ಕೇಳಿದಾಗ, ನೇರವಿನ ಮಹಾಪೂರವೇ ಹರಿದು ಬಂದಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಈ ಹಣವನ್ನು ಕೊಡಗು ಸಂತ್ರಸ್ತರಿಗೆ ತಲುಪಿಸುತ್ತೇವೆ ಎಂದು ಪಿಎಸ್ಐ ರಫೀಕ್ ಮಹಮ್ಮದ್ ತಿಳಿಸಿದ್ದಾರೆ..

Leave a Reply

Your email address will not be published.

Social Media Auto Publish Powered By : XYZScripts.com