ದೆಹಲಿ : 113 ಪ್ರಕರಣ ಹೊಂದಿದ್ದ 63 ವರ್ಷದ ಲೇಡಿ ಡಾನ್​ ಅರೆಸ್ಟ್….!

ನವದೆಹಲಿ : ದೆಹಲಿಯ ಕ್ರಿಮಿನಲ್ ಲೇಡಿ ಡಾನ್​ ಎಂದೇ ಕುಖ್ಯಾತಿ ಪಡೆದಿರುವ 62ವರ್ಷದ ಬಸಿರಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲೂ ಈಕೆಯ ಮೇಲೆ 113 ಕೇಸ್​ಗಳು ದಾಖಲಾಗಿದೆ.

ದೆಹಲಿಯಲ್ಲಿ ಅತೀ ಹೆಚ್ಚು ಅಪರಾಧ ಹಿನ್ನಲೆ ಹೊಂದಿರುವ ಲೇಡಿ ಡಾನ್​ ನನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಹಲವು ದಶಕಗಳಿಂದ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ತನ್ನ 8 ಮಕ್ಕಳೊಂದಿಗೆ ಬಸಿರಾನ್ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಳು. ಬಸಿರಾನ್ ಮೇಲೆ ಕೊಲೆ, ಸುಪಾರಿ, ಹಣಕ್ಕಾಗಿ ಅಪಹರಣ, ಅಕ್ರಮ ಮದ್ಯ ವ್ಯವಹಾರ, ದರೋಡೆ ಸೇರದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿತ್ತು.

2017 ರಲ್ಲಿ ಕೊಲೆ ಪ್ರಕರಣ ಸೇರಿದಂತೆ ಇದುವರೆಗೂ ಬಸಿರಾನ್ 9 ಬಾರಿ ಬಂಧಿಸಲಾಗಿದೆ. ದೆಹಲಿಯಲ್ಲಿನ  ಪ್ರಮುಖ ಕುಡಿಯುವ ನೀರಿನ ಕೇಂದ್ರಗಳ ಮೇಲೆ ತಮ್ಮ ಹಿಡಿತ ಬಸಿರಾನ್​ ಹೊಂದಿದ್ದಳು. ಅಲ್ಲದೇ ಹಲವು ಅಕ್ರಮ ವ್ಯವಹಾರ ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ.

ವ್ಯಕ್ತಿಯೊಬ್ಬರಿಂದ 21 ವರ್ಷದ ಮೀರಾಜ್ ಎಂಬ ಯುವಕನ್ನು ಕೊಲೆ ಮಾಡಲು ಬಸಿರಾನ್ 60 ಸಾವಿರ ರೂ. ಸುಪಾರಿ ಪಡೆದ್ದಳು. ಈ ಪ್ರಕರಣದಲ್ಲಿ ಕಳೆದ 8 ತಿಂಗಳಿನಿಂದ ಬಸಿರಾನ್ ನನ್ನು ಬಂಧಿಸಿಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಆದರೆ ಇಂದ ಈಕೆಯನ್ನು ಪೊಲೀಸರು ಬಂಧಿಸು್ವಲ್ಲಿ ಯಶಸ್ವಿಯಾಗಿದ್ದಾರೆ. 1990 ರಲ್ಲಿ ಅಪರಾಧ ಜಗತ್ತಿಗೆ ಪ್ರವೇಶಿಸಿದ ಬಸಿರಾನ್ ಮೊದಲು ಕಳ್ಳಭಟ್ಟಿ ವ್ಯವಹಾರ ನಡೆಸಿದ್ದಳು. ಬಳಿಕ ಅನೇಕ ಅಪರಾಧ ಕೃತ್ಯಗಳಲ್ಲಿ ತೊಡಗಿ ತನ್ನ ಮಕ್ಕಳಿಗೂ ಪ್ರೇರಣೆ ನೀಡಿದ್ದಳು.

 

Leave a Reply

Your email address will not be published.

Social Media Auto Publish Powered By : XYZScripts.com