ಪವರ್ ​ಸ್ಟಾರ್​ಗೆ ಹೊಸ ಬಿರುದು ಕೊಟ್ಟ ಸಂಸದೆ ಶೋಭಾ ಕರಂದ್ಲಾಜೆ…? ಏನದು…

ಬೆಂಗಳೂರು :  ಸಂಸದೆ,  ಕರ್ನಾಟಕ ರಾಜ್ಯದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಅವರನ್ನು ಕಿಂಗ್​ ಆಫ್​ ಸ್ಯಾಂಡಲ್​​ವುಡ್​ ಎಂದು ಬಿರುದು ನೀಡಿದ್ದಾರೆ.

ಪುನೀತ್​ರನ್ನ ಭೇಟಿ ಮಾಡಿದ ಶೋಭಾ ಪ್ರಧಾನಿ ಮೋದಿ ಸರ್ಕಾರದ ಸಾಧನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.  ಅಷ್ಟೇ ಅಲ್ಲದೇ  Sampark For Samarthan ಅಭಿಯಾನ ವಿಚಾರ ನಾಲ್ಕು ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ಏನೇನು ಕೆಲಸ ಮಾಡಿದೆ ಎಂಬ ಸಾಧನೆಯ ಪುಸ್ತಕವನ್ನು ಅವರಿಗೆ ನೀಡಿದ್ದಾರೆ.

ಪುನೀತ್ ಭೇಟಿಯಾದ ವಿಚಾರ ಬಗ್ಗೆ ಶೋಭಾ ಕರಂದ್ಲಾಜೆ ಅವರು ಟ್ವಿಟ್ಟರ್​ನಲ್ಲಿ ಹಾಕಿಕ್ಕೊಂಡಿದ್ದು “ಅಪ್ಪನಂತೆ ಮಗ, Sampark For Samarthan ವಿಷಯಕ್ಕಾಗಿ ಇಂದು ಕಿಂಗ್ ಆಫ್ ಸ್ಯಾಂಡಲ್ ವುಡ್ ಹಾಗೂ ಒಬ್ಬ ಒಳ್ಳೆಯ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಅವರ ಜೊತೆಗೆ ಪ್ರಧಾನಿ ಮೋದಿ ಅವರ ಸಾಧನೆಗಳ ಬಗ್ಗೆ ಚರ್ಚೆ ಮಾಡಿದೆ.” ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com