ಮಹಾಮಳೆಗೆ ಭೂ ಕುಸಿತ : ಕೊಡಗಿನಲ್ಲಿ ಜಂಟಿ ಕಾರ್ಯಚರಣೆ, 128 ಮಂದಿ ರಕ್ಷಣೆ…!

ವರುಣನ ಆರ್ಭಟಕ್ಕೆ ಜನರು ಅಕ್ಷರಸಹ ನಲುಗಿಹೋಗಿದ್ದು, ಎಲ್ಲೆಡೆ ಭೂ ಕುಸಿತ, ಗುಡ್ಡ ಕುಸಿತ ನಿಲ್ಲುತ್ತಿಲ್ಲ, ರೈಲ್ವೆ ಹಳಿ ಮೇಲೆ ಗುಡ್ಡಗಳೂ ಕುಸಿಯುತ್ತಿದ್ದು, ಮಹಾಮಳೆಗೆ ಜನರು ಆಸ್ತಿ ಪಾಸ್ತಿಯನ್ನು ಕಳೆದುಕೊಂಡಿದ್ದಾರೆ.

ಕೊಡಗಿನಲ್ಲಿ ಮಳೆಯ ರೌದ್ರನರ್ತನ ಮುಂದುವರೆದಿದ್ದು, ಪ್ರವಾಹ ಪೀಡಿತ ಕೊಡಗಿನಲ್ಲಿ ಕರ್ನಾಟಕ ಸಿವಿಲ್ ಡಿಫೆನ್ಸ್ ನ ಕ್ಷಿಪ್ರ ಕಾರ್ಯಾಚರನೆ ಪಡೆಯು ನಡೆಸಿದ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ತುಂಬು ಗರ್ಭಿಣಿ ಮತ್ತು ಐವರು ಹಿರಿಯ ನಾಗರಿಕರು ಸೇರಿ 128 ಮಂದಿಯನ್ನು ರಕ್ಷಿಸಲಾಗಿದೆ.

ಚಾಮರಾಜನಗರದಲ್ಲಿ ಕಾವೇರಿ-ಕಬಿನಿಯಿಂದ ಹೆಚ್ಚು ನೀರು ಬಿಟ್ಟಿರುವ ಹಿನ್ನೆಲೆ ನದಿ ಪಾತ್ರದ ಗ್ರಾಮಗಳಲ್ಲಿ ಮುಂದುವರಿದ ಕಾವೇರಿ ಆರ್ಭಟಕ್ಕೆ ಗ್ರಾಮದ ಶೇಕಡ 60 ರಷ್ಟು ಜನರಿಗೆ ಗಂಜಿ ಕೇಂದ್ರ, ಸಂಬಂಧಿ ಕರ ಮನೆಗಳಲ್ಲಿ ಆಶ್ರಯ ನೀಡಲಾಗುತ್ತಿದೆ, ಇನ್ನ ದಾಸನಪುರದಲ್ಲಿ ಕುಡಿಯುವ ನೀರಿಗೆ ಆಹಾಕಾರ ಹೆಚ್ಚಾಗಿದೆ. ಹರಿಯುವ ನೀರನ್ನೆ ಕುಡಿಯುತ್ತಿರುವ ಗ್ರಾಮಸ್ಥರಿಗೆ ಸಾಂಕ್ರಾ ಮಿಕ ರೋಗದ ಭೀತಿ ಉಂಟಾಗಿದ್ದು, ಕಾವೇರಿ ಕೊಳ್ಳದಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ವರದಿ ತಿಳಿಸಿದೆ.

ಮಂಜಿನ ನಗರಿ, ಪ್ರವಾಸಿಗರ ಸ್ವರ್ಗವಾದ ಕೊಡಗು ವರುಣನ ಆರ್ಭಟಕ್ಕೆ ಅಕ್ಷರಶಃ ಮುಳುಗಿ ಹೋಗಿದ್ದು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಸಹಿತ ಇಡೀ ಸರ್ಕಾರವೇ ನೆರವಿಗೆ ಧಾವಿಸಿದೆ. ಸರ್ಕಾರವಲ್ಲದೇ ಹಲವಾರು ಮಾಧ್ಯಮದವರು ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗಾಗಿ ಕೇಂದ್ರದ ರಕ್ಷಣಾ ಪಡೆಗಳು ಬಂದಿಳಿದು ಮಳೆಯಲ್ಲಿ ಸಿಲುಕಿರುವ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಕಾರ್ಯದಲ್ಲಿ ತೊಡಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಶನಿವಾರ ಉನ್ನತ ಮಟ್ಟದ ಸಭೆ ನಡೆಸಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಸೂಚನೆ ನೀಡಿ ಕೊಡಗಿಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿ ಮಳೆಯಿಂದ ಉಂಟಾಗಿರುವ ಅನಾಹುತ ವೀಕ್ಷಿಸಿದರು. ಇಂದು ಸಿಎಂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಈ ಮಧ್ಯೆ ಭೂಕುಸಿತದಲ್ಲಿ ಸಿಲುಕಿರುವ 60 ಮಂದಿ ರಕ್ಷಣೆಗೆ ಸಿಎಂ ಅವರು ಆಗಮಿಸಿದ್ದ ಹೆಲಿಕಾಪ್ಟರ್‌ ಅನ್ನು ಬಳಕೆ ಮಾಡುತ್ತಿರುವುದರಿಂದ ಭಾನುವಾರವೂ ಕುಮಾರಸ್ವಾಮಿ ಅವರು ಕೊಡಗಿನಲ್ಲೇ ಉಳಿಯಲಿದ್ದಾರೆ. ಹೀಗಾಗಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಪ್ರವಾಸ ರದ್ದು ಪಡಿಸಿದ್ದಾರೆ. ಇತ್ತ ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್‌ ಜಾಮ್‌ ಆಗಿ ಜನ ಹರಸಾಹಸ ಪಟ್ಟಿದ್ದು. ಭಾರೀ ವಾಹನಗಳ ಓಡಾಟದ ಬಗ್ಗೆ ಆದ ಗೊಂದಲ ಇನ್ನಷ್ಟು ಟ್ರಾಫಿಕ್‌ ಜಾಮ್‌ಗೆ ಕಾರಣವಾಯಿತು. ಹೀಗಾಗಿ 5 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

 

Leave a Reply

Your email address will not be published.

Social Media Auto Publish Powered By : XYZScripts.com