Cricket : ಉತ್ತಮ ಮೊತ್ತದತ್ತ ಸಾಗಿದ ಭಾರತ : ಆಸರೆಯಾದ ಕೊಹ್ಲಿ, ರಹಾನೆ…!

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಶನಿವಾರ ಮೂರನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಫೀಲ್ಡಿಂಗ್ ಅಯ್ದುಕೊಂಡರು.

ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬದಲು ಆಗಿ ಆಡುವ ಅವಕಾಶ ಪಡೆದ ಯುವ ಆಟಗಾರ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.

Image result for kohli rahane

ಮೊದಲ ಬ್ಯಾಟ್ ಮಾಡಲಿಳಿದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಮೊತ್ತದತ್ತ ಸಾಗಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 307 ರನ್ ಸೇರಿಸಿದೆ. 22 ರನ್ ಗಳಿಸಿರುವ ರಿಷಭ್ ಪಂತ್ ಅಜೇಯರಾಗುಳಿದಿದ್ದು ಕ್ರೀಸ್ ನಲ್ಲಿದ್ದಾರೆ.

ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಉಪನಾಯಕ ಅಜಿಂಕ್ಯ ರಹಾನೆ 81 ರನ್ ಗಳಿಸಿ ಆಸರೆಯಾದರು. 97 ರನ್ ಗಳಿಸಿ ಔಟಾದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ವಂಚಿತರಾದರು. ಇಂಗ್ಲೆಂಡ್ ಪರವಾಗಿ ಕ್ರಿಸ್ ವೋಕ್ಸ್ ಮೂರು ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com