ಪ್ರಿಯಾಂಕ​ ಮತ್ತು ​ನಿಕ್​ ನಿಶ್ಚಿತಾರ್ಥ ಸಮಾರಂಭ : ಸಂಜೆ ಪಾರ್ಟಿ ಆಯೋಜಿಸಿರುವ ಪಿಗ್ಗಿ..!

ಬಾಲಿವುಡ್​ ಹಾಟ್​ ಬ್ಯೂಟಿ ಪ್ರಿಯಾಂಕ್​ ಚೋಪ್ರಾ ಮತ್ತು ಹಾಲಿವುಡ್​ ಸಿಂಗರ್​ ನಿಕ್​ ಜೋನಾಸ್​ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ಮುಂಬೈನ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ನಡೆದಿದೆ.

ಚಲನಚಿತ್ರ ರಂಗದ ಸ್ನೇಹಿತರಿಗೆ ಹಾಗೂ ಕುಟುಂಬದ ಆಪ್ತ ಸಂಬಂಧಿಕರಿಗೆ ಪ್ರಿಯಾಂಕಾ ಮತ್ತು ನಿಕ್ ಕುಟುಂಬ ವಿಶೇಷ ಔತಣಕೂಟ ಏರ್ಪಡಿಸಿದೆ. ಈ ಮೂಲಕ ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಇಂದು ಸಂಜೆ 5 ಸ್ಟಾರ್ ಹೋಟೆಲ್ ನಲ್ಲಿ ನಿಶ್ಚಿತಾರ್ಥದ ಸಂಬಂಧ  ಔತಣಕೂಟ ಏರ್ಪಾಟಾಗಿದೆ ಎಂದು ತಿಳಿದುಬಂದಿದೆ
 

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಇಬ್ಬರು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಬಹಿರಂಗವಾಗಿದೆ. ನಿಕ್ ಜೋನಾಸ್ ಬಿಳಿ ಬಣ್ಣದ ಕುರ್ತಾ ತೊಟ್ಟಿದ್ದು, ಪ್ರಿಯಾಂಕಾ ಹಳದಿ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಇಬ್ಬರು ಒಟ್ಟಿಗೆ ಕೂತು ಶಾಸ್ತ್ರಗಳನ್ನ ಪೂರೈಸುತ್ತಿದ್ದಾರೆ. ಇನ್ನೂ ಪ್ರಿಯಾಂಕ್​ ತಮ್ಮ ಇನ್​ಸ್ಟಾಗ್ರಾಂ ನಲ್ಲಿ ಫೋಟೋ ಹಾಕಿದ್ದಾರೆ.

Taken.. With all my heart and soul..

A post shared by Priyanka Chopra (@priyankachopra) on

ಆಗಸ್ಟ್ 18 ಕೇವಲ ಪ್ರಿಯಾಂಕಾ ಮತ್ತು ನಿಕ್ ನಿಶ್ಚಿತಾರ್ಥ ಕಾರ್ಯಕ್ರಮ ಮಾತ್ರವಲ್ಲ,  ಇಂದು ಪ್ರಿಯಾಂಕಾ ಅವರ ಬರ್ತಡೇ ಕೂಡ ಇದೆ. ಹೀಗಾಗಿ, ಬಾಲಿವುಡ್ ತಾರೆಯರು ಹಾಗೂ ಕುಟುಂಬಸ್ಥರಿಗೆ ಸಂಜೆ ಡಿನ್ನರ್ಡನ್ನಿರ್ ಪಾರ್ಟಿ ಆಯೋಜನೆ ಮಾಡಲಾಗಿದೆ. ಆ ವೇಳ ಪರಸ್ಪರ ಉಂಗುರ ಬದಲಿಸಿಕೊಳ್ಳುವ ಪ್ಲಾನ್ ಮಾಡಲಾಗಿದೆಯಂತೆ. ಎನ್ನಲಾಗಿದೆ.

2 thoughts on “ಪ್ರಿಯಾಂಕ​ ಮತ್ತು ​ನಿಕ್​ ನಿಶ್ಚಿತಾರ್ಥ ಸಮಾರಂಭ : ಸಂಜೆ ಪಾರ್ಟಿ ಆಯೋಜಿಸಿರುವ ಪಿಗ್ಗಿ..!

Leave a Reply

Your email address will not be published.