KPL 2018 : ಬಳ್ಳಾರಿ ಬಗ್ಗುಬಡಿದ ಬೆಂಗಳೂರು ಬ್ಲಾಸ್ಟರ್ಸ್ : ಅರ್ಶದೀಪ್ ಅರ್ಧಶತಕ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20 ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ತಂಡ 6 ರನ್ ಜಯ ಸಾಧಿಸಿದೆ. ಸತತ 2ನೇ ಗೆಲುವಿನೊಂದಿಗೆ ಬೆಂಗಳೂರು ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಟಾಸ್ ಗೆದ್ದ ಬಳ್ಳಾರಿ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಬೆಂಗಳೂರು ನಿಗದಿತ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಮೊತ್ತ ಕಲೆಹಾಕಿತು. ಬೆಂಗಳೂರು ಪರವಾಗಿ ಅರ್ಧಶತಕ ದಾಖಲಿಸಿದ ಅರ್ಶದೀಪ್ ಸಿಂಗ್ ಬ್ರಾರ್ 67 ಹಾಗೂ ಚೇತನ್ ವಿಲಿಯಮ್ಸ್ 22 ರನ್ ಗಳಿಸಿದರು.

ಗುರಿಯನ್ನು ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್ 20 ಓವರುಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 161 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಬಳ್ಳಾರಿ ಪರವಾಗಿ ಅರ್ಧಶಕ ಸಿಡಿಸಿದ ಅಭಿನವ್ ಮನೋಹರ್ 61 ಹಾಗೂ ರೋಹನ್ ಕಾದಮ್ 31 ರನ್ ಗಳಿಸಿದರು. ಬೆಂಗಳೂರು ಬ್ಲಾಸ್ಟರ್ಸ್ ಪರವಾಗಿ ಎಮ್ ಎಸ್ ಭಾಂಡಗೆ 3, ಕೌಶಿಕ್ ವಿ 2 ಹಾಗೂ ಭರತ್ ಡಿ 2 ವಿಕೆಟ್ ಪಡೆದರು.

 

 

Leave a Reply

Your email address will not be published.

Social Media Auto Publish Powered By : XYZScripts.com