ಭಾರೀ ಮಳೆಗೆ ಮುಳುಗಿದ ಕೊಡಗು : ಸಾವಿನ ಸಂಖ್ಯೆ 6ಕ್ಕೆ ಏರಿಕೆ, ರಕ್ಷಣೆಗಾಗಿ ಸೇನಾಪಡೆ ಆಗಮನ

ಕೊಡಗು : ಕೊಡಗಿನಲ್ಲಿ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಹರಸಾಹಸಪಡುವಂತಾಗಿದೆ. ಮುಕ್ಕೋಡುವಿನಲ್ಲಿ 30ಕ್ಕೂ ಹೆಚ್ಚು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ ಎಂದು ವರದಿ ತಿಳಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಜೋಡುಪಾಲದಲ್ಲಿ 200 ಜನರನ್ನು  ರಕ್ಷಣೆ ಮಾಡಿದೆ.

ಕೊಡಗಿನಲ್ಲಿ ಜಲ ಪ್ರಳಯಕ್ಕೆ ತುತ್ತಾಗಿದ್ದು,  ದೇವಸ್ತೂರಿನಲ್ಲಿ 50 ಮಂದಿ ಹೀಗೆ ಹಲವು ಪ್ರದೇಶಗಳಲ್ಲಿ ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಮಂಗಳೂರು : ಮಂಗಳೂರಿನಿಂದ ಕೇರಳಕ್ಕೆ ಪ್ರಾರ್ಥನೆಗೆ ಹೋಗಿದ್ದ ಮುಡಿಪು ನಿವಾಸಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕುಟುಂಬ ಕೇರಳ ಪ್ರವಾಹದಲ್ಲಿ ಸಿಲುಕಿದಕೊಂಡು ಊಟ, ತಿಂಡಿ ಮತ್ತು ಹೊರಗಿನ ಸಂಪರ್ಕ ಸಿಗದೇ ಕಂಗಾಲಾಗಿದ್ದು. ಸಚಿವ ಯು.ಟಿ.ಖಾರದ್ ಮತ್ತು ಮಾಜಿ ಶಾಸಕ ಜೆ.ಆರ್.ಲೋಬೊರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಸಂಪರ್ಕ ಸಿಗದೆ ಕುಟುಂಬ ಕಂಗಾಲಾದರು.

Balaki returns to her kitchen in Kulkunda ST colony after flooding to find it full of muck

ಭಾರೀ ಮಳೆಯಿಂದಾಗಿ ಹಳಿ ಮೇಲೆ ಗುಡ್ಡ ಕುಸಿಯುತ್ತಿದ್ದು, ಈ ಸಂದರ್ಭದಲ್ಲಿ ಯಡಕುಮೇರಿಯಲ್ಲಿ 16 ಮಂದಿ ರೈಲ್ವೆ ಸಿಬ್ಬಂದಿಗಳು ಅಪಾಯದಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸಲು ಟ್ರಕ್ಕಿಂಗ್ ಪರಿಣತರೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಮಡಿಕೇರಿ‌ ಸಮೀಪದ 2ನೇ ಮೊಣ್ಣಂಗೇರಿಯಲ್ಲಿದ್ದ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದು, ಪುಟ್ಟ ಮಕ್ಕಳು ಸೇರಿದಂತೆ 50ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಾತ್ರಿ ವೇಳೆಗೆ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರಕ್ಷಣಾ ಪಡೆ  ಕರೆ ತಂದರು. ಅಪಾರ ಪ್ರಮಾಣದ ಆಸ್ತಪಾಸ್ತಿ ನಷ್ಟವಾಗಿದೆ.  ವರುಣನ ಅಟ್ಟಹಾಸಕ್ಕೆ ಇಲ್ಲಿಯವರೆಗೆ 10ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು,  ಹಲವಾರು ಮಂದಿ ಕಣ್ಮರೆಯಾದವರ ಬಗ್ಗೆ  ನಿಖರ ಮಾಹಿತಿಯಿಲ್ಲ.  ಕಳೆದ ಕೆಲ‌ ದಿನಗಳಿಂದ ಕಡಿತಗೊಂಡಿರುವ ವಿದ್ಯುತ್ ಸಂಪರ್ಕದಿಂದ  ಮೊಬೈಲ್ ಚಾರ್ಜ್ ಇಲ್ಲದೆ ಸಂತ್ರಸ್ತರ ಸಂಪರ್ಕಕ್ಕೆ ಅಡ್ಡಿಯಾಗಿದೆ. ಜನರಿಗೆ  ಕ್ಷಣಕ್ಷಣಕ್ಕೂ ಆತಂಕ  ಹೆಚ್ಚುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com