ಚಾರ್ಮಾಡಿ ಘಾಟ್​ನಲ್ಲಿ ಇಂದಿನಿಂದ ಘನವಾಹನ ಸಂಚಾರ ಸ್ಥಗಿತ : ಯು ಟಿ ಖಾದರ್​

ವರುಣನ ರೌದ್ರನರ್ತನ ಇನ್ನೂ ಮುಂದುವರೆದಿದ್ದು, ಹಲವೆಡೆ ಜಲಪ್ರಳಯ, ಗುಡ್ಡ ಕುಸಿತ, ಗಾಳಿ ಸಮೇತ ಮಳೆಗೆ ಮನೆ ಕುಸಿದಿದ್ದು, ಕೆಲವೆಡೆ ಗ್ರಾಮಕ್ಕೆ ಗ್ರಾಮವೇ ಮುಳುಗಿದ್ದು, ಜನರು ಬೇರೆ ಕಡೆಗೆ ಸ್ಥಳಾಂತರವಾಗುತ್ತಿದ್ದರೆ. ಇನ್ನೂ ಕೆಲವೆಡೆ ರಸ್ತೆ ಮತ್ತು ರೈಲ್ವೇ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Image result for heavy rain karnatka

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ನೆರೆ ಸಂತ್ರಸ್ತ ಸ್ಥಳಗಳಿಗೆ ಭೇಟಿ ನೀಡಿ,  ಪತ್ರಕರ್ತರ ಜತೆ ಮಾತನಾಡಿದ ಯು. ಟಿ  ಖಾದರ್​, ಸದ್ಯ ಚಾರ್ಮಾಡಿ ಘಾಟಿ ರಸ್ತೆ ಮಾತ್ರ ಬಳಕೆಯಲ್ಲಿದೆ. ಗುಡ್ಡ ಜರಿತ ಹತೋಟಿಗೆ ಬರುವ ತನಕ  ಚಾರ್ಮಾಡಿ  ರಸ್ತೆಯ ಒತ್ತಡ ತಗ್ಗಿಸಲು ಆ. 18ರಿಂದ ಘನ ವಾಹನ ಸಂಚಾರ ತಡೆ ಹಿಡಿಯುವುದಾಗಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟದಿಂದ, ರೈಲ್ವೇ ಸೇತುವೆಗಳ ಮೇಲೆ  ಭಾರಿ ಬಂಡೆಗಳು ಬಿದಿದ್ದು, ಸಕಲೇಶಪುರ-ಮಂಗಳೂರು ರೈಲ್ವೇ ಸಂಪರ್ಕದಲ್ಲಿ 50 ಕಡೆ ಗುಡ್ಡ ಕುಸಿದಿದೆ. ಮಣ್ಣು ತೆರವುಗೊಳಿಸಲು ರೈಲ್ವೇ ಸಿಬ್ಬಂದಿಗಲು ಪಾರದಾಡುತ್ತಿದ್ದು, ಸಕಲೇಶಪುರ ತಾಲ್ಲೂಕಿನ ಎಡಕುಮರಿ ಮತ್ತು ಸುತ್ತ ಮುತ್ತ ಗುಡ್ಡಗಳು ಕುಸಿದಿದೆ. ರೈಲ್ವೆ ಸಂಚಾರ ಸಹಜ  ಸ್ಥಿತಿಗೆ  ಬರಲು ಒಂದು ತಿಂಗಳಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದರು.

ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಳೆಯಿಂದ ಪ್ರಕೃತಿ ವಿಕೋಪ ಸಂಭವಿಸಿದೆ. ವರುಣ ಕೋಪದಿಂದ ಶಾಂತಿಗೆ ಜಾರುವ ಸಮಯ ಇನ್ನೂ ಒದಗಿಲ್ಲ, ಸಂರಕ್ಷಣೆ ಮತ್ತು ನಿಯಂತ್ರಣಕ್ಕೆ ಮೊದಲ ಆದ್ಯತೆ. ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎ.ಸಿ. ಮಟ್ಟದ ಅಧಿಕಾರಿಗಳನ್ನು ನೋಡೆಲ್‌ ಅಧಿಕಾರಿಯಾಗಿ ಇಟ್ಟುಕೊಂಡು ತಹಶೀಲ್ದಾರ್‌ ಮಾರ್ಗದರ್ಶನದಲ್ಲಿ ನಿಯಂತ್ರಿಸಲಾಗುತ್ತಿದೆ. ಮಳೆ ಸಂತ್ರಸ್ತರಿಗೆ ಗಂಜಿ ಕೇಂದ್ರ ಸ್ಥಾಪಿಸಲಾಗಿದ್ದು. ಜಿಲ್ಲೆಯಲ್ಲಿ ಮಳೆ ಕಾರಣಕ್ಕೆ 12 ಮಂದಿ ಮೃತಪಟ್ಟಿದ್ದಾರೆ. ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com