ಹಾಸನ : ಮೂರು ದಿನ ಕಳೆದರೂ ಸಿಗದ ಮೃತದೇಹ : ಡಿಸಿ ರೋಹಿಣಿ ಮೊರೆ ಹೋದ ಜನರು..!

ಹಾಸನ : ಭಾರೀ ಮಳೆಯಿಂದ ಜನ ಕಂಗಲಾಗಿದ್ದು, ಹಾಸನದಲ್ಲಿ ಟ್ಯಾಂಕರ್​ ಉರುಳಿ ಬಿದ್ದ ಪರಿಣಾಮ ಚಾಲಕನ ಮೃತದೇಹ ಪತ್ತೆಯಾಗದೆ ಕುಟುಂಬಸ್ಥರು  ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರವೇ ಜನರ ಮೃತದೇಹ ಪತ್ತೆ ಮಾಡಿಕೊಡುವಂತೆ ಡಿಸಿ ರೋಹಿಣಿ ಸಿಂಧೂರಿ ಹತ್ತಿರ ಮನವಿ ಮಾಡಿಕೊಂಡಿದ್ದಾರೆ.

ಟ್ಯಾಂಕರ್ ಇಂಜಿನ್ ಜೊತೆಗೆ ನೀರಿನಲ್ಲಿ ಮುಳುಗಿದ್ದ ಚಾಲಕನ ಮೃತದೇಹ 10 ಅಡಿಯ ಕೆಸರಿನಲ್ಲಿ ಸಿಲುಕಿದ್ದ ಕಾರಣ ಪತ್ತೆ ಮಾಡುವ ಕಾರ್ಯ ವಿಳಂಬವಾಗುತ್ತಿದ್ದು, ನಿರಂತರ ಕಾರ್ಯಚರಣೆ ನಡೆಯುತ್ತಿದೆ.

ಹಾಸನದಲ್ಲಿ ವರುಣ ರೌದ್ರನರ್ತನ ಮುಂದವರೆದಿದ್ದು, ಮೂರು ದಿನಗಳ ಹಿಂದೆ ಗ್ಯಾಸ್​ ಟ್ಯಾಂಕರ್​ ಉರುಲೀ ಬಿದ್ದಿತ್ತು, ಟ್ಯಾಂಕರ್​ ಚಾಲಕ ಸಂತೋಷ ಮೃತದೇಹ ಇಷ್ಟು ದಿನ ಮತ್ತೆಯಾಗದ ಕಾರಣ ಮೃತ ದೇಹ ಹುಡುಕಿಕೊಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಿಸಿ ಕಚೇರಿ ಎದುರು ಕುಟುಂಬಸ್ಥರು ಧರಣಿ ನಡೆಸುತ್ತಿದ್ದು, ಕೊಡಲೇ ಮೃತದೇಹ ಪತ್ತೆ ಮಾಡುವಂತೆ ಒತ್ತಾಯಿಸಿದ್ದಾರೆ ಬಳಿಕ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ರೋಹಿಣಿ ಸಿಂಧೂರಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿ ಭರವಸೆ ನೀಡಿದ್ದಾರೆ. ಜನರು ಮೃತದೇಹ ಮಾಡುವಂತೆ ಮನವಿಗೆ ರೋಹಿನಿ ಭಾವುಕರಾಗಿ, ಶೀಘ್ರವೇ ಪತ್ತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com