ಸ್ಯಾಂಡಲ್​ವುಡ್​ ಹಿರಿಯ ನಟನ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರಾದ ಜೈ ಜಗದೀಶ್​..!

ಬೆಂಗಳೂರು : ಸ್ಯಾಂಡಲ್​ವುಡ್​ ಹಿರಿಯ ನಟ ಜೈ ಜಗದೀಶ್​​ ಅವರ ಕಾರು ಅಪಘಾತಕ್ಕೊಳಗಾಗಿದ್ದು, ಅದೃಷ್ಟವಶಾತ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನಿಂದ ಚೆನ್ನರಾಯಪಟ್ಟಣಕ್ಕೆ ಹೋಗುವ ದಾರಿಯಲ್ಲಿ ನಡೆಯಿತು.

ಬೆಂಗಳೂರಿನಿಂದ ಚೆನ್ನರಾಯಪಟ್ಟಣ ಮೂಲಕ ಮಡಿಕೇರಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಮಾರ್ಗ ಮಧ್ಯೆ ಬಂದ ಬೈಕಿಗೆ ಡಿಕ್ಕಿಯಾಗೋದನ್ನು ತಪ್ಪಿಸಲು ಹೋಗಿ ಕಾರ್ ರಸ್ತೆ ಬದಿಯ ಗದ್ದೆಗೆ ನುಗ್ಗಿದೆ, ಕಾರಿಗೆ ಅಡ್ಡಲಾಗಿ ಬೈಕ್​ ಬಂದ ತಕ್ಷಣ ಸವಾರ ಪ್ರಾಣ ಉಳಿಸಿಕೊಳ್ಳುಲು ಕಾರ್​ ಟರ್ನ್​ ಮಾಡಿದಾಗ ಜಮೀನಿಗೆ ನುಗ್ಗಿ ನಿಂತಿತ್ತು ಎನ್ನಲಾಗಿದೆ. ಈ  ಅಪಘಾತದಲ್ಲಿ ಜೈ ಜಗದೀಶ್ ಅವರಿಗೆ ಸಣ್ಣ ಗಾಯಗಳಾಗಿದ್ದು,  ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published.