ಸ್ಮೃತಿ ಸ್ಥಳದತ್ತ ವಾಜಪೇಯಿ ಪಾರ್ಥಿವ ಶರೀರ : ಕಂಬನಿಯೊಂದಿಗೆ ಹೆಜ್ಜೆ ಹಾಕಿದ ಮೋದಿ..!

ದೆಹಲಿ :  ಮಾಜಿ ಪ್ರಧಾನಿ ಅಜಾತಶತ್ರು ಅಟಲ್​ ಬಿಹಾರಿ  ವಾಜಪೇಯಿ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಿಂದ ಅಂತ್ಯಕ್ರಿಯೆಗೆ ನಿಗದಿಪಡಿಸಲಾದ ಸ್ಮೃತಿ ಸ್ಥಳದತ್ತ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೆರವಣಿಗೆಯ ನೇತೃತ್ವ ವಹಿಸಿಕೊಂಡಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಿಂದ ಹೊರಟ ಪಾರ್ಥಿವ ಶರೀರದ  ಅಂತಿಮ ಯಾತ್ರೆಯಲ್ಲಿ  ಲಕ್ಷಾಂತರ ಜನರ ಮಧ್ಯೆಯೂ ಪ್ರಧಾನಿ ನರೇಂದ್ರಮೋದಿ  ತನ್ನ ನೆಚ್ಚಿನ ಗುರುವಿನ ಅಂತಿಮ ಯಾತ್ರೆಯಲ್ಲಿ ನಡೆದು ಸಾಗುವ ಮೂಲಕ  ಗುರು- ಶಿಷ್ಯರ ನಡುವಿನ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದರು.

qgpv5rvg

ಜವಾಹರಲಾಲ್ ನೆಹರೂ ಅವರ ಸಮಾಧಿ  ಶಾಂತಿವನ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಸಮಾಧಿ ವಿಜಯ್ ಘಾಟ್  ಬಳಿ ಇರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಂಜೆ  ಅಂತ್ಯಸಂಸ್ಕಾರ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com