ವರುಣನ ಆಕ್ರೋಶಕ್ಕೆ 7 ಬಲಿ : ಕೊಡಗು ಮತ್ತು ಕರಾವಳಿಯಲ್ಲಿ ನಿಲ್ಲದ ಜಲಪ್ರಳಯ…!

ಮಲೆನಾಡು, ಕೊಡಗು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಭಾರೀ  ಮಳೆಯಿಂದ 7 ಮಂದಿ ಅಸುನೀಗಿದ್ದಾರೆ. ಎಲ್ಲೆಡೆ ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.


ಕೊಡಗಿನಲ್ಲಿ ಹಿಂದೆಂದೂ ಕಾಣದಂತಹ ಜಲ ಪ್ರಳಯ ಉಂಟಾಗಿದ್ದು, ನೂರಾರು ಮನೆಗಳು ನೆಲಕುರುಳಿದೆ.  ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಇಡೀ ಜಿಲ್ಲೆ ದ್ವೀಪವಾಗಿ ಮಾರ್ಪಟ್ಟಿದೆ. ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ನದಿಗಳ ಪ್ರವಾಹದಿಂದ ಜನಜೀವನ ತತ್ತರಿಸುತ್ತಿದೆ. ಕಾವೇರಿ ಸೇರಿದಂತೆ ಹಲವು ನದಿಗಳು ಭೋರ್ಗರೆಯುತ್ತಿರುವುದರಿಂದ ನದಿಪಾತ್ರದ ಹಲವು ಪ್ರದೇಶಗಳು ಮುಳುಗಡೆಯಾಗಿದೆ. ಜಲಾಶಯಗಳ ತುಂಬಿ ತುಳುಕುತ್ತಿದ್ದು, ಅಲ್ಲಿಂದ ಹೊರ ಬಿದ್ದ ಜಲಪ್ರವಾಹ ಊಹೆಗೆ ನಿಲುಕದಷ್ಟು ಹಾನಿ ಮಾಡಿದೆ. ಹೈದರಾಬಾದ್‌ ಕರ್ನಾಟಕದಲ್ಲೂ ಮಳೆ ಆರ್ಭಟ ಆತಂಕ ತಂದಿದೆ.

ಶಿರಾಡಿಯಲ್ಲಿ ಕಂದಕಕ್ಕೆ ಉರುಳುತ್ತಿದ್ದ ಬಸ್, ಪ್ರಯಾಣಿಕರು ಬಚಾವ್

ಸೇತುವೆ ಮೇಲೆ ಸಿಕ್ಕಿಹಾಕಿಕೊಂಡ ಖಾಸಗಿ ಬಸ್
ಗುಡ್ಡ ಕುಸಿತದಿಂದ  50ಕ್ಕೂ ಅಧಿಕ ಮಂದಿ ರಕ್ಷಣೆ ಮಾಡಲಾಗಿದ್ದು, ಕಾಲೂರು, ಹೆಬ್ಬೆಟ್ಟಗೇರಿ, ದೇವಸ್ತೂರು, ಮುಕ್ಕೋಡ್ಲು ಭಾಗದ ಬಹುಪಾಲು ರಕ್ಷಣೆ ಮಾಡಲಾಗಿದೆ. ಅತಂತ್ರ ಸ್ಥಿತಿಯಲ್ಲಿದ್ದ ಜನರನ್ನು ರಕ್ಷಿಸಿದ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯ ನಾಗರೀಕರು. ಮಳೆಯಲ್ಲಿ ನಡೆದು ಬರುವಾಗ  ಬಾಣಂತಿ, ಮಗು  ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಲಭ್ಯವಾಗದೆ ನವಜಾತ ಶಿಶು ಮೃತಪಟ್ಟಿದೆ.
ಗುಡ್ಡದಾಚೆಗೆ ಹಲವರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಆ ಸ್ಥಳದಲ್ಲಿ  ಶಾಸಕ ಕೆ.ಜಿ. ಬೋಪಯ್ಯ ಸಂಬಂಧಿಗಳು ಸಿಲುಕಿದ್ದು, ಕುಟುಂಬಸ್ಥರನ್ನು ನೆನೆದು ಕೆಜಿಬಿ ಕಣ್ಣೀರು ಹಾಕಿದ್ದಾರೆ.
ಮಡಿಕೇರಿಯಲ್ಲಿ ಚೆಂಡಿನಂತೆ ಜರುಗಿ ತೋಟವೊಂದರಲ್ಲಿ ನೆಲೆ ನಿಂತ ಮನೆ!

ಮಡಿಕೇರಿಯ ಕಾಟಕೇರಿ ಬಳಿಯಲ್ಲಿ ಭೂಕುಸಿತಕ್ಕೆ ಮೂವರು ಬಲಿಯಾಗಿದ್ದು, ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಮಕನೂರು ಪ್ರದೇಶದಲ್ಲಿರುವ ಕೊಡಲು-ಮಂಗಳೂರಿನ ಹೆದ್ದಾರಿಗಳು ಸಂಪೂರ್ಣವಾಗಿ ಬಂದ್ ಆಗಿವೆ ಎಂದು ತಿಳಿದುಬಂದಿದೆ.

ಧಾರಾಕಾರ ಮಳೆಯಿಂದಾಗಿ ಚಿಕ್ಕಮಗಳೂರಿನ ಮನೆ ಗೋಡೆಗಳು ಕುಸಿದಿದ್ದು,  ಜಯಮ್ಮ ಎಂಬವರಿಗೆ ಸೇರಿದ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು, ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಮಣ್ಣುಪಾಲಾಗಿವೆ. ಇದರಿಂದಾಗಿ ಕಂಗಾಲಾದ ವೃದ್ಧೆ ಜಯಮ್ಮ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

flood situation in coorg

ರಾಯಚೂರು : ಮಂತ್ರಾಲಯದಲ್ಲಿ ಪ್ರವಾಹದಿಂದ ಭಕ್ತರಿಗೆ ತೊಂದರೆಯಾಗುತ್ತದೆ ಎಂಬ ವದಂತಿಗೆ ಕಿವಿಗೊಡದಂತೆ ಮಂತ್ರಾಲಯ ಮಠ ಸ್ಪಷ್ಠನೆ ನೀಡಿದೆ. ಇತ್ತೀಚಿಗೆ ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಮಂತ್ರಾಲಯ ಮಠದ ಆವರಣಕ್ಕೆ ನೀರು ನುಗ್ಗಿದೆ, ಇದರಿಂದ ರಾಯರ ದರ್ಶನವಾಗುತ್ತಿಲ್ಲ ಎನ್ನುವ ವದಂತಿ ಮಠದವರು ಸ್ಪಷ್ಟನೆ ನೀಡಿದ್ದಾರೆ. ಮಠದ ಆವರಣದೊಳಗೆ ನೀರು ಬಂದಿಲ್ಲ, ಭಕ್ತರು ರಾಯರ ದರ್ಶನಕ್ಕೆ ಆ ೨೫ ರಿಂದ ೨೯ ರವರೆಗೆ ರಾಯರ ಆರಾಧನೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಠನೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com