ಹಾಸನ : ಪ್ಲಾಸ್ಟಿಕ್ ಫ್ಯಾಕ್ಟರಿಗೆ ಬೆಂಕಿ : ಕೋಟ್ಯಂತರ ಮೌಲ್ಯದ ವಸ್ತುಗಳು ಭಸ್ಮ

ಹಾಸನ : ಪ್ಲಾಸ್ಟಿಕ್​ ಫ್ಯಾಕ್ಟರಿಯಲ್ಲಿ ಬೆಂಕಿ  ಹೊತ್ತಿಕೊಂಡು ಕೋಟ್ಯಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ತಡರಾತ್ರಿ ಘಟನೆ ಸಂಭವಿಸಿದ್ದು, ಮುಂಜಾನೆವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯಿತು.

ಅಹಾಸನದ ಕೈಗಾರಿಕ ಬಡಾವಣೆಯಲ್ಲಿರುವ ಪೈರೋಜ್ ಎಂಬವರಿಗೆ ಸೇರಿದ ಪ್ಲಾಸ್ಟಿಕ್ ಫ್ಯಾಕ್ಟರಿ,  ತಡರಾತ್ರಿ 1 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ಉತ್ಪನ್ನಗಳ ಖಾಸಗಿ ಘಟಕವಾಗಿದ್ದು,  ಕಚ್ಚಾ ವಸ್ತುಗಳಾದ ಪೇಪರ್ ಮತ್ತು ಪ್ಲಾಸ್ಟಿಕ್ ವಸ್ತುಗಳು ಭಸ್ಮವಾಗಿವೆ. ಕಾರ್ಖಾನೆ ಒಳಗೆ ನಿಂತಿದ್ದ ಲಾರಿಯಿಂದ ಶಾರ್ಟ್ ರ್ಸಕ್ಯೂಟ್ ಆಗಿ ಕಾರ್ಖಾನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಈ ಅಗ್ನಿ ಅವಘಡದಿಂದ ಕೋಟ್ಯಂತರ ಮೌಲ್ಯದ ವಸ್ತು ನಷ್ಟವಾಗಿದ್ದು,  ಸ್ಥಳಕ್ಕೆ 5 ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ತಡರಾತ್ರಿ 1 ಗಂಟೆಯಿಂದ ಮುಂಜಾನೆವರೆಗೂ ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published.