ದರ್ಶನ್​ 52ನೇ ಸಿನಿಮಾ ಲಾಂಚ್​ : ಒಡೆಯನಿಗೆ ಸಾಥ್​ ನೀಡಿದ ರೆಬೆಲ್​ ಸ್ಟಾರ್​

ಮೈಸೂರು : ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮೂಲಕ ಸದ್ದು ಮಾಡಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ  ಸಿನಿಮಾ  ಒಡೆಯರ್​  ಸಿನಿಮಾ ಶೀಷಿಕೆಯನ್ನು ‘ಒಡೆಯ’ ಎಂದು ಒದಲಿಸಿ ನೆನ್ನೆ ಮೈಸೂರಿನಲ್ಲಿ ಅದ್ದೂರಿಯಾಗಿ ಲಾಂಚ್​ ಮಾಡಿದೆ, ದರ್ಶನ್​ರ 52ನೇ ಸಿನಿಮಾ ‘ಒಡೆಯ’ ಮೂಹೂರ್ತಕ್ಕೆ ರೆಬೆಲ್​ ಸ್ಟಾರ್​ ಅಂಬರೀಶ್​ ಭಾಗಿಯಾಗಿ, ದರ್ಶನಗೆ ಸಾಥ್​ ನೀಡಿದ್ದರು….

ದರ್ಶನ್​ರ 52ನೇ  `ಒಡೆಯ’ ಸಿನಿಮಾದ ಮುಹೂರ್ತ ಗುರುವಾರ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಒಡೆಯ ಸಿನಿಮಾವನ್ನು ನಿರ್ಮಾಪಕ ಸಂದೇಶ್ ನಾಗರಾಜ್ ಅವರು ನೆನ್ನೆ  ಹುಟ್ಟುಹಬ್ಬವಾದ ಹಿನ್ನೆಲೆಯಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಅಂಬರೀಶ್ ಭಾಗಿಯಾಗಿದ್ದು, ದರ್ಶನ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

`ಒಡೆಯ’ ಸಿನಿಮಾವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀಧರ್ ದರ್ಶನ್ ಜೊತೆಗೆ `ಬುಲ್ ಬುಲ್’ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದ ನಂತರ ಮತ್ತೆ ಈ ಜೋಡಿ ಒಂದಾಗಿದೆ.

ನಟ ದರ್ಶನ್ ಒಂದರ ನಂತರ ಒಂದರಂತೆ ಬೇರೆ ಬೇರೆ ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ. ದರ್ಶನ್ ಕೆರಿಯರ್ ನ ಮಹತ್ವದ ಸಿನಿಮಾ ‘ಕುರುಕ್ಷೇತ್ರ’ದ ಶೂಟಿಂಗ್ ಹಾಗೂ ಡಬ್ಬಿಂಗ್ ಮುಗಿದಿದ್ದು, ಇದರ ಜೊತೆ ಜೊತೆಗೆ ‘ಯಜಮಾನ’ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಬಿಜಿ ಇದ್ದಾರೆ. ಈ ಸಿನಿಮಾಗಳ ನಡುವೆ ಈಗ ದರ್ಶನ್ ಅವರ 52ನೇ ಸಿನಿಮಾ ಸೆಟ್ಟೇರುವ ಮೂಹೂರ್ತ ಅದ್ದೂರಿಯಾಗಿ ನೆರೆವೆರಿದೆ.

 

Leave a Reply

Your email address will not be published.