Cricket : ಸ್ಪಾಟ್ ಫಿಕ್ಸಿಂಗ್ ಪ್ರಕರಣ : ಪಾಕ್ ಆಟಗಾರ ನಾಸಿರ್ ಜೆಮ್‍ಶೆಡ್ ಗೆ 10 ವರ್ಷ ನಿಷೇಧ

ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪದ ಮೇಲೆ ಪಾಕ್ ಕ್ರಿಕೆಟರ್ ನಾಸಿರ್ ಜೆಮ್ ಶೆಡ್ ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) 10 ವರ್ಷಗಳ ನಿಷೇಧ ಹೇರಿದೆ. ನಿಷೇಧದ ಅವಧಿಯಲ್ಲಿ ನಾಸಿರ್ ಜೆಮ್ ಶೆಡ್ ಯಾವುದೇ ಮಾದರಿಯ ಕ್ರಿಕೆಟ್ ಟೂರ್ನಿಯಲ್ಲಿಯೂ ಭಾಗವಹಿಸುವಂತಿಲ್ಲ ಎಂದು ಪಿಸಿಬಿ ಶುಕ್ರವಾರ ಹೇಳಿದೆ. ನಿಷೇಧ ಹೇರಲಾಗಿರುವ ವಿಷಯವನ್ನು ಪಿಸಿಬಿ ತನ್ನ ಟ್ವಿಟರ್ ಅಕೌಂಟ್ ನಿಂದ ಟ್ವೀಟ್ ಮಾಡುವ ಮೂಲಕ ತಿಳಿಸಿದೆ.

2016/17ನೇ ಸಾಲಿನಲ್ಲಿ ನಡೆದ ಪಾಕಿಸ್ತಾನ ಪ್ರಿಮಿಯರ್ ಲೀಗ್ ಪಿಎಸ್ ಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ನಾಸಿರ್ ಜೆಮ್ ಶೆಡ್ ಎದುರಿಸುತ್ತಿದ್ದರು.

One thought on “Cricket : ಸ್ಪಾಟ್ ಫಿಕ್ಸಿಂಗ್ ಪ್ರಕರಣ : ಪಾಕ್ ಆಟಗಾರ ನಾಸಿರ್ ಜೆಮ್‍ಶೆಡ್ ಗೆ 10 ವರ್ಷ ನಿಷೇಧ

Leave a Reply

Your email address will not be published.

Social Media Auto Publish Powered By : XYZScripts.com