KPL 2018 : ಬುಲ್ಸ್ ವಿರುದ್ಧ ಟೈಗರ್ಸ್ ತಂಡಕ್ಕೆ 4 ವಿಕೆಟ್ ಜಯ : ಮೊಹಮ್ಮದ್ ತಹಾ ಅರ್ಧಶತಕ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ಟಿ-20 ಪಂದ್ಯದಲ್ಲಿ ಬಿಜಾಪುರ ಬುಲ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ತಂಡ 4 ವಿಕೆಟ್ ಜಯ ಸಾಧಿಸಿದೆ.

ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಿಜಾಪುರ ಬುಲ್ಸ್ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಮೊತ್ತ ಕಲೆಹಾಕಿತು. ಬಿಜಾಪುರ ಪರವಾಗಿ ಭರತ್ ಚಿಪ್ಲಿ ಅಜೇಯ 29 ಹಾಗೂ ನವೀನ್ 44 ರನ್ ಗಳಿಸಿದರು. ಟೈಗರ್ಸ್ ಪರವಾಗಿ ಮಹೇಶ್ ಪಾಟೀಲ್ 3 ಹಾಗೂ ಅನಿಲ್ ಐ ಜಿ 2 ವಿಕೆಟ್ ಉರುಳಿಸಿದರು.

ಗುರಿಯನ್ನು ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ 18.5 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿ ಗೆಲುವಿನ ದಡ ಸೇರಿತು. ಟೈಗರ್ಸ್ ಪರವಾಗಿ ಅರ್ಧಶತಕ ದಾಖಲಿಸಿದ ಎಮ್ ಡಿ ತಹಾ 62 ರನ್ ಬಾರಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

Leave a Reply

Your email address will not be published.