ವಾಜಪೇಯಿ ಒಬ್ಬ ಮುತ್ಸದ್ದಿ ರಾಜಕಾರಣಿ, ಮಹಾನ್ ಸಂಸದೀಯ ಪಟು : ಸಿದ್ದರಾಮಯ್ಯ

ವಾಜಪೇಯಿ ನಿಧನ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ‘ ವಾಜಪೇಯಿ ಒಬ್ಬ ಮುತ್ಸದ್ದಿ ರಾಜಕಾರಣಿ. ದೀರ್ಘ ಕಾಲ ರಾಜಕೀಯ ಜೀವನದಲ್ಲಿ ಇದ್ದವರು. ಜನಸಂಘ, ಬಿಜೆಪಿ ಬೆಳೆಯುವುದಕ್ಕೆ ಅವರ ಶ್ರಮ ಬಹಳ ಇದೆ. ಅವರು ಒಬ್ಬ ಮಹಾನ್ ಸಂಸದೀಯ ಪಟು ‘ ಎಂದಿದ್ದಾರೆ.

‘ ಪಾರ್ಲಿಮೆಂಟಲ್ಲಿ ಅವರ ಭಾಷಣ ಬಹಳ ಅದ್ಭುತವಾಗಿತ್ತು. ಮಾದರಿ ರಾಜಕಾರಣಿ, ಸ್ಪೂರ್ತಿಯುತ ರಾಜಕಾರಣಿ. ಜನತಾ ಪಾರ್ಟಿ ಆದ್ಮೇಲೆ ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ದೆ. ಡಿಸಿಎಂ ಆಗಿದ್ದಾಗ ಕಾವೇರಿ ವಿಚಾರಕ್ಕೆ ಭೇಟಿ ಮಾಡಿದ್ದೆ. ವೈಯಕ್ತಿತವಾಗಿಯೂ ಕೂಡ ವಾಜಪೇಯಿ ನನಗೆ ತೀರಾ ಪರಿಚಯವಿತ್ತು ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com