ಕೇರಳದಲ್ಲಿ ನಿಲ್ಲದ ವರುಣನ ಅಬ್ಬರ : ಭಾರೀ ಮಳೆಯಿಂದ ಸಾವಿನ ಸಂಖ್ಯೆ 97ಕ್ಕೆ ಏರಿಕೆ…!

ಕೇರಳ : ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗುತ್ತಿದ್ದು, ತಿರುವನಂತಪುರಂನಲ್ಲಿ ಧಾರಾಕಾರ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದೆ. ಭೂ ಕುಸಿತ ಉಂಟಾಗಿ ದೇವರನಾಡಿನಲ್ಲಿ ಸಾವಿನ ಸಂಖ್ಯೆ 97ಕ್ಕೇರಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

 

Image result for ಕೇರಳ ಮಳೆ

ಹವಾಮಾನ ಇಲಾಖೆಯ  ವರದಿಗಳ ಪ್ರಕಾರ ರಾಜ್ಯದಲ್ಲಿ  ನಾಳೆಯವರೆಗೆ ಧಾರಾಕಾರ ಮಳೆ ಮುಂದುವರೆಯಲಿದೆ ಎನ್ನಲಾಗುತ್ತಿದ್ದು, ನೆನ್ನೆ ಸುರಿದ ಮಳೆಗೆ ಕೇರಳದಲ್ಲಿ 30 ಜನ ಮೃತಪಟ್ಟಿದ್ದಾರೆ..  ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಪ್ರವಾಹದಿಂದಾಗಿ ಆಗಸ್ಟ್ 26ರವರೆಗೆ ವಿಮಾನಗಳ ಆಗಮನ ಮತ್ತು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಕೊಚ್ಚಿ ಮೆಟ್ರೊ ಸೇವೆಯನ್ನು ಆರಂಭಿಸಿದೆ. ಈ ಮಧ್ಯೆ ರಾಜ್ಯದ ಶಾಲೆಗಳಲ್ಲಿ ಓಣಂ ರಜೆಯನ್ನು ನಿನ್ನೆಯಿಂದ ಆಗಸ್ಟ್ 29ರವರೆಗೆ ನೀಡಲಾಗಿದೆ. 

 

Leave a Reply

Your email address will not be published.

Social Media Auto Publish Powered By : XYZScripts.com