ತುಮಕೂರು : ಮಧುಗಿರಿ ಏಕಶಿಲಾ ಬೆಟ್ಟದಿಂದ ಕಾಲುಜಾರಿ ಬಿದ್ದು ಯುವಕ ಸಾವು..

ತುಮಕೂರು ಜಿಲ್ಲೆಯ ಮಧುಗಿರಿಯ ಏಕಶಿಲಾ ಬೆಟ್ಟದಿಂದ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಯುವಕನ ಮೃತ ದೇಹ ತೆರವು ಕಾರ್ಯಾಚರಣೆ ಶುರುವಾಗಿದೆ. ಸ್ಪೈಡರ್ ಮ್ಯಾನ್‌ ಚಿತ್ರದುರ್ಗದ ಜ್ಯೋತಿರಾಜ್ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈಗಾಗಲೇ ಬೆಟ್ಟದ ತುದಿಗೆ ತಲುಪಿರುವ ಜ್ಯೋತಿರಾಜ್ ಹಗ್ಗದ ಮೂಲಕ ಮೃತದೇಹ ಇರುವ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿಂದ ಮೃತದೇಹವನ್ನು ಚೀಲದಲ್ಲಿ ಹಾಕಿಕೊಂಡು ತರಲಿದ್ದಾರೆ. ಯುವಕ ನಿನ್ನೆಯೆ ಕಾಲು ಜಾರಿ ಬಿದ್ದು ಸಾವನಪ್ಪಿದ್ದ.

ಅಗ್ನಿಶಾಮಕ ದಳ ಹಾಗೂ ಪೊಲೀಸರು ನಿನ್ನೆಯೆ ಕಾರ್ಯಾಚರಣೆ ನಡೆಸಿ ಶವ‌ ತೆಗೆಯಲು ಪ್ರಯತ್ನಿಸಿದ್ರೂ ಸಾಧ್ಯವಾಗಿರಲಿಲ್ಲ. ಹಾಗಾಗಿ ಜ್ಯೋತಿರಾಜ್ ಮೊರೆ ಹೋಗಿದ್ರು. ನಿನ್ನೆ ರಾತ್ರಿಯೇ ಮಧುಗಿರಿಗೆ ಬಂದು ತಂಗಿದ್ದ ಜ್ಯೋತಿರಾಜ್ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com