Bollywood masala : ರಣಬೀರ್ ಕಪೂರ್ – ಆಲಿಯಾ ಭಟ್ ಮದುವೆಗೆ Date fix…..

ಮುಂದಿನ ವರ್ಷ ರಣಬೀರ್-ಆಲಿಯಾ ಮದುವೆ ! ಆಲಿಯಾ ಭಟ್ ಹಾಗೂ ರಣ್ ಬೀರ್ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ದರಾಗಿದ್ದಾರೆ!

ಮುಂದಿನ ವರ್ಷಾಂತ್ಯದೊಳಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಈ ಇಬ್ಬರೂ ತಯಾರಿ ನಡೆಸುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆಲಿಯಾ ತಾನು 30 ವರ್ಷ ತುಂಬುವುದರೊಳಗೆ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಹೇಳಿಕೊಂಡಿದ್ದರು.


ಈ ಹಿಂದೆ ರಣ್ ಬೀರ್ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಜೊತೆಗೆ ಡೇಟಿಂಗ್ ಮಾಡುವಾಗ, ಬೇಸರ ವ್ಯಕ್ತಪಡಿಸಿದ್ದ ರಿಶಿ ಕಪೂರ್, ಈ ಬಾರಿ ಆಲಿಯಾ ಜೊತೆಗಿನ ಸಂಬಂಧದ ಬಗ್ಗೆ ಖುಷಿಯಾಗಿಯೇ ಇದ್ದಾರೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದಲ್ಲಿ ಇವರಿಬ್ಬರು ಸತಿಪತಿಗಳಾಗಲಿದ್ದಾರೆ. ಸದ್ಯಕ್ಕೆ ರಣ್ ಬೀರ್ ಸಂಜು ಚಿತ್ರ ಸೂಪರ್ ಹಿಟ್ ಆಗಿರುವ ಖುಷಿಯಲ್ಲಿದ್ದರೆ, ಆಲಿಯಾ ರಾಝಿ ಚಿತ್ರದ ಯಶಸ್ಸಿನ ಹ್ಯಾಂಗೋವರ್ ನಲ್ಲಿದ್ದಾರೆ. ಆಲಿಯಾ ಭಟ್  ಹೆಸರು ಈ ಮೊದಲು ಸಿದ್ದಾರ್ಥ ಕಪೂರ್ ಮತ್ತು ವರುಣ ದವನ್ ಜೊತೆ ಕೆಳಿ ಬರುತ್ತಿತ್ತು…

Leave a Reply

Your email address will not be published.

Social Media Auto Publish Powered By : XYZScripts.com