ಸಂಪುಟದಿಂದ ಅಂಬಿ ಕೈಬಿಟ್ಟಿದಕ್ಕೆ ಮಂಡ್ಯದಲ್ಲಿ ಕಾಂಗ್ರೆಸ್ ಸೋಲಲು ಕಾರಣ -ಶ್ರೀನಿವಾಸ್ ಪ್ರಸಾದ್…

ನಾನು ಅಂಬರೀಷ್ ಸಂಪುಟ ಸಹದ್ಯೋಗಿಗಳು. ಅಂಬರೀಶ್ ರನ್ನ ಸಂಪುಟದಿಂದ ಕೈಬಿಟ್ಟ ನಂತರ ಕಳೆದ ಚುನಾವಣೆಯಲ್ಲಿ ಫಲಿತಾಂಶದ ಪರಿಣಾಮ ಏನಾಯಿತು ಎಂಬುದು ಎಲ್ಲರಿಗು ತಿಳಿದಿದೆ ಎಂದು ಕಾಂಗ್ರೆಸ್ ಗೆ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಟಾಂಗ್ ನೀಡಿದರು.


ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಜನ್ಮದಿನ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಸಿನೆಮಾ ಮುಹೂರ್ತ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ ಪಾಲ್ಗೊಂಡು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿಸಚಿವ ಹಾಗೂ ಹಿರಿಯ ನಟ ಅಂಬರೀಷ್ , ಶಾಸಕರಾದ ಎಲ್ ನಾಗೇಂದ್ರ , ಹರ್ಷ ವರ್ಧನ್ ಉಪಸ್ಥಿತರಿದ್ದರು. ಮುಹೂರ್ತಕಾರ್ಯಕ್ಕೆ ಚಿತ್ರ ನಟ ದರ್ಶನ್ ನೂಕು ನುಗ್ಗಲಿನಲ್ಲಿ ಆಗಮಿಸಿದರು.

ಬಳಿಕ ಕಾಂಗ್ರೆಸ್ ವಿರುದ್ದ ಮತ್ತೆ ಗುಡುಗಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ , ಮಾಜಿ ಸಚಿವ ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಟ್ಟ ಮೇಲೆ ಇಡೀ ಸರ್ಕಾರವೇ ಅವರ ಮನೆ ಬಳಿ ಹೋಗಿತ್ತು. ಆದರೂ ಅಂಬರೀಶ್ ಮನಸ್ಸು ಮಾಡಲಿಲ್ಲ ಅದರ ಪರಿಣಾಮವೇ ಮಂಡ್ಯ ರಾಜಕೀಯ ಚಿತ್ರಣ ಬದಲಾಯಿತು. ಈಗ ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಆ ಸರ್ಕಾರದ ಸ್ಥಿತಿ ಗತಿ ಗಳು ಏನಾಗಿದೆ ಎಂಬುದು ತಿಳಿದಿದೆ ಎಂದು ಕಿಡಿಕಾರಿದರು.

Leave a Reply

Your email address will not be published.

Social Media Auto Publish Powered By : XYZScripts.com