ಬಸವಣ್ಣನವರದ್ದು ಕೊಲೆಯಲ್ಲ, ಇಚ್ಛಾಮರಣ – ಭಗವಾನ್ ಹುಚ್ಚರಂತೆ ಮಾತನಾಡಬಾರದು : ಮಾತೆ ಮಹಾದೇವಿ

ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರವಾಗಿ ಕೂಡಲಸಂಗಮದಲ್ಲಿ ಮಾತೆಮಹಾದೇವಿ ಹೇಳಿಕೆ ನೀಡಿದ್ದಾರೆ. ‘ ಅಕ್ಟೋಬರ್ ತಿಂಗಳಲ್ಲಿ ದೆಹಲಿಯಲ್ಲಿ ಮೂರು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 6,7 ರಂದು ದೆಹಲಿಯಲ್ಲಿ ಸಭೆ ನಡೆಸಲಿದ್ದೇವೆ. ಅಕ್ಟೋಬರ್ 8 ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿ ನಡೆಸುತ್ತೇವೆ ‘ ಹೇಳಿದ್ದಾರೆ.

‘ ರಾಜ್ಯಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರಕಾರ ಈ ಬಗ್ಗೆ ಕಾರ್ಯ ಪ್ರವೃತ್ತವಾಗಿಲ್ಲ. ಕೇಂದ್ರಸರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸ್ಸಿಗೆ ಮಾನ್ಯತೆ ನೀಡಬೇಕು. ಲೋಕಸಭಾ ಚುನಾವಣೆ ಬಗ್ಗೆ ಸದ್ಯ ನಾವು ತಟಸ್ಥ ಧೋರಣೆ ಅನುಸರಿಸುತ್ತೇವೆ. ನಮಗೆ ಯಾರು ಸ್ಪಂದಿಸುತ್ತಾರೋ ಅವರಿಗೆ ಬೆಂಬಲ ನೀಡುತ್ತೇವೆ ‘ ಎಂದಿದ್ದಾರೆ.

ಬಸವಣ್ಣನವರ ಸಾವಿನ ಬಗ್ಗೆ ಕೆ ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ ಬಸವಣ್ಣನವರ ಬಗ್ಗೆ ಭಗವಾನ್ ಹುಚ್ಚರ ರೀತಿ ಮಾತನಾಡಾರದು. ಅವರನ್ನು ಚಾಕು ಹಾಕಿ ಕೊಲೆ ಮಾಡಿದ್ದಾರೆ ಎಂದು ಹೇಳೋದು ತಪ್ಪು. ಬಸವಣ್ಣನವರು ವರ್ಣಾಂತರ ವಿವಾಹ ಮಾಡಿದ್ದರು. ಅದಕ್ಕಾಗಿ ಅವರನ್ನು ಗಡಿಪಾರು ಮಾಡಲಾಗಿತ್ತು ‘ ಎಂದಿದ್ದಾರೆ.

‘ ಕೂಡಲಸಂಗಮದಲ್ಲಿ ಯೋಗಾನುಷ್ಟಾನ ಮಾಡಿ ಬಸವಣ್ಣನವರು ಇಚ್ಚಾಮರಣ ಹೊಂದಿದ್ದಾರೆ ‘ ಎಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com