ಕಾರವಾರ : ಗಿಡಗಳನ್ನು ನೆಡುವುದರ ಮೂಲಕ ‘ಹಸಿರು ಕರ್ನಾಟಕ’ ಯೋಜನೆಗೆ ಚಾಲನೆ..

ಕಾರವಾರ : ಹಸಿರು ಕರ್ನಾಟಕ ಯೋಜನೆಯಡಿಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಲಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರ ಪ್ರೌಢಶಾಲೆ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.ಅರಣ್ಯಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ,ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯ ದಲ್ಲಿ ಕಾರ್ಯಕ್ರಮ ನಡೆಯಿತು.

ಶಿವಾಜಿ ವಿದ್ಯಾಮಂದಿರದ ವಿದ್ಯಾರ್ಥಿಗಳು ಅರಣ್ಯ ರಕ್ಷಣೆ ಹಾಗೂ ಗಿಡಗಳನ್ನು ಬೆಳೆಸುವು ದರ ಕುರಿತು ಘೋಷಣೆಯ ಮೂಲಕ ಜಾಗೃತಿ ಮೂಡಿಸಿ ದರು.ಗಿಡ‌ಮರಗಳ ಅನಿವಾರ್ಯತೆ ಕುರಿತು ಅರಣ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಪ್ರತಿಯೊ ಬ್ಬರು ಗಿಡಗಳನ್ನು ನೆಡುವುದು ಇಂದಿನ ದಿನಗಳಲ್ಲಿ ಅನಿವಾ ರ್ಯವಾಗಿದೆ.

ಮುಂದಿನ‌ ಪೀಳಿಗೆಗೆ ಉತ್ತಮ‌ ಪರಿಸರ, ಶುದ್ದ ಗಾಳಿ ಬರಲು ಹಸಿರು ವನಗಳ‌ ರಕ್ಷಣೆಗೆ ನಾವು ಪಣತೊಡಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು.ಪ್ರತಿಯೊಬ್ಬ ವಿದ್ಯಾರ್ಥಿಗಳಿಗೊಂದರಂತೆ ಗಿಡಿ ನೆಟ್ಟು ಆ ಗಿಡದ ಆರೈಕೆಯ ಜವಾಬ್ದಾರಿ ವಹಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ,ಪತ್ರಕರ್ತ ರು ಸೇರಿದಂತೆ ಪ್ರೌಢಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published.