ಮಹದಾಯಿ ವಿವಾದ : ಗೋವಾ ಸುಪ್ರೀಂ ಮೊರೆ ಹೋಗುವ ಮೊದಲು ನಾವು ಹೋಗುತ್ತೇವೆ – HDD

ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿದ್ದು, ಈ ಕುರಿತು ಗೋವಾ ಸರ್ಕಾರ ಸುಪ್ರೀಂಕೋರ್ಟ್ ಗೆ ಹೋದರೇ ನಾವು ಸುಮ್ಮನಿರಲ್ಲ ನಾವು ಹೋಗುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.

ಮಹದಾಯಿ ನ್ಯಾಯಾಧೀಕರಣ ಅಂತಿಮ ತೀರ್ಪು ಕುರಿತು ನವದೆಹಲಿಯಲ್ಲಿ ಇಂದು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ತೀರ್ಪಿನ ಪ್ರತಿಯನ್ನ ನಾನು ಇನ್ನು ಓದಿಲ್ಲ. ಎಲ್ಲಿ ಸಮಸ್ಯೆ ಇದೆ ಎಂಬುದನ್ನ ಅಧ್ಯಯನ ಮಾಡ್ತೇನೆ. ಬಳಿಕ ಸಲಹೆ ನೀಡುತ್ತೇನೆ. ಈ ಬಗ್ಗೆ ಸರ್ಕಾರ, ಹಿರಿಯ ವಕೀಲರು, ಮತ್ತು ಫಾಲಿನಾರಿನಮನ್ ಅವರ ಜತೆಯೂ ಚರ್ಚೆ ಮಾಡುತ್ತೇನೆ. ನಾನು ನನ್ನ ಅನುಭವದಿಂದ ನಾನು ಸಲಹೆ ನೀಡುತ್ತೇನೆ ಎಂದರು.

ಇನ್ನು ಮೋಹನ್ ಕಾತರಕಿ ಅವರು ಸುಪ್ರೀಂಕೋರ್ಟ್ ಗೆ ಹೋಗಾದಾಗಿ ತಿಳಿಸಿದ್ದಾರೆ. ಮಹದಾಯಿ ನದಿ ನೀರು ಯೋಜನೆಗಾಗಿ ಹಲವು ದಿನಗಳಿಂದ ಹೋರಾಟಮಾಡಿದ್ದ ರೈತರು ಈಗ ತೀರ್ಪಿನಿಂದ ಸಂತೋಷ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗೋವಾ ಸುಪ್ರಿಂಕೋರ್ಟ್ ಗೆ ಹೋದರೇ ನಾವು ಸಹ ಹೋಗುತ್ತೇವೆ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com