Breaking news : ಬೆಂಗಳೂರು ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ…?

ರಾಜ್ಯರಾಜಧಾನಿ ಬೆಂಗಳೂರಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಜರಾಜೇಶ್ವರಿ ನಗರ, ಕುಮಾರ ಸ್ವಾಮಿ ಲೇ ಔಟ್ ಹಾಗೂ ಜೆ.ಪಿ. ನಗರ,ಜಯನಗರ ಸೇರಿದಂತೆ ಹಲವೆಡೆ ಇಂದು ಭೂಮಿ ಕಂಪಿಸಿದ ಅನುಭವವಾಗಿದ್ದು, ಜನತೆ ಆತಂಕಕ್ಕೊಳಗಾದ ಘಟನೆ ನಡೆದಿದೆ. ಇಂದು ಮಧ್ಯಾಹ್ನ 2- ರಿಂದ 3 ಗಂಟೆ ಸಮಯದಲ್ಲಿ ಕೆಲವು ಸೆಕೆಂಡುಗಳ ಕಾಲ ಈ ಅನುಭವವಾಗಿದ್ದು, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಜೊತೆಗೆ ಭಾರೀ ಸದ್ದು ಕೇಳಿ ಬಂದಿದೆ ಎಂದು ಹಲವರು ಹೇಳಿಕೊಂಡಿದ್ದು, ಭೂಮಿ ನಡುಗಿದ ಅನುಭವವಾದ ವೇಳೆ ಕೆಲ ಸಾರ್ವಜನಿಕರು ಗಾಬರಿಯಿಂದ ತಮ್ಮ ಮನೆಯಿಂದ ಹೊರಗೋಡಿ ಬಂದಿರುವ ಘಟನೆಯೂ ನಡೆದಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಭೂಗರ್ಭ ವಿಜ್ಞಾನಿ ಹೆಚರ್.ಎಸ್ ಎಂ ಪ್ರಕಾಶ್, ಇದು ಭೂಕಂಪನವಲ್ಲ. ಗಾಳಿಯ ಸ್ಥಾನಪಲ್ಲಟದಿಂದ ಈ ರೀತಿ ಅನುಭವವಾಗಿದೆ ಎಂದಿದ್ದಾರೆ.

13 thoughts on “Breaking news : ಬೆಂಗಳೂರು ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ…?

Leave a Reply

Your email address will not be published.

Social Media Auto Publish Powered By : XYZScripts.com