ಹೊಸಪೇಟೆ : ತುಂಬಿ ಹರಿಯುತ್ತಿರುವ ತುಂಗೆಗೆ ಬಾಗಿನ ಅರ್ಪಿಸಿದ ಸಚಿವ ಡಿಕೆಶಿ..

ಹೊಸಪೇಟೆ : ಕಳೆದೊಂದು ತಿಂಗಳಿನಿಂದ ತುಂಬಿ ಹರಿಯುತ್ತಿರುವ ತುಂಗಭದ್ರಾ ಜಲಾಶಯಕ್ಕೆ ಶಾಸಕರಾದ ಆನಂದ್ ಸಿಂಗ್ ಸೇರಿದಂತೆ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಬಾಗಿನ ಅರ್ಪಿಸಿದರು.

ಸಚಿವರಾದ ಶ್ರೀಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸಚಿವರಾದ ಶ್ರೀವೆಂಕಟರಾವ್ ನಾಡಗೌಡ ರವರು, ಶ್ರೀ ಶಂಕರ ರವರು ಮತ್ತು ಆನಂದ್ ಸಿಂಗ್ ತುಂಗೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು. ಪ್ರತಿ ವರ್ಷವೂ ಇದೇ ರೀತಿ ತುಂಗಭದ್ರೇ ಉಕ್ಕಿ ಹರಿದು ಈ ಭಾಗದ ರೈತರ ಬದುಕು ಹಸನಾಗಲಿ ಎಂದು ಶಾಸಕರಾದ ಆನಂದ್ ಸಿಂಗ್ ಹಾರೈಸಿದರು.

Leave a Reply

Your email address will not be published.

Social Media Auto Publish Powered By : XYZScripts.com