ಸಿಎಂ ಕುಮಾರಸ್ವಾಮಿ ಶಾಸಕರ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ : ಸಿ.ಟಿ ರವಿ ಗಂಭೀರ ಆರೋಪ

‘ ಸಿಎಂ ಕುಮಾರಸ್ವಾಮಿಯವರಿಂದ ಬಿಜೆಪಿ, ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ‘ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ. ‘ ಸರಕಾರ ಶಾಸಕರ ಫೋನ್ ಕದ್ದಾಲಿಕೆ ಮಾಡ್ತಿದೆ. ಎಲ್ಲ ಶಾಸಕರ ಫೋನ್ ಕದ್ದಾಲಿಸುತ್ತಿದೆ. ಅಧಿಕಾರಿಗಳಿಂದ ನಮಗೆ ಮಾಹಿತಿ ಬಂದಿದೆ ‘ ಎಂದಿದ್ದಾರೆ.

‘ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್ ಸೇರಿ ಎಲ್ಲ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗ್ತಿದೆ. ಸಿಎಂ ಕುಮಾರಸ್ವಾಮಿಯವರಿಂದಲೇ ಫೋನ್ ಕದ್ದಾಲಿಕೆ ನಡೆದಿದೆ. ಯಾವಾಗ ಏನಾಗುತ್ತೋ ಅನ್ನುವ ಆತಂಕ ಕುಮಾರಸ್ವಾಮಿಯವರಿಗಿದೆ. ಹಾಗಾಗಿ ಅವರು ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com