ಅಟಲ್ ಜೀ ಆರೋಗ್ಯವಂತರಾಗಿ ಬಂದು ನಮ್ಮಂತವರಿಗೆ ಮಾರ್ಗದರ್ಶನ ಮಾಡಲಿ : ಪ್ರಹ್ಲಾದ್ ಜೋಶಿ

ವಾಜಪೇಯಿ ಅವರ ಜೊತೆ ಒಂದು ಅವಧಿ ಲೋಕಸಭೆಯಲ್ಲಿ ಕೆಲಸ ಮಾಡಿದ ಅನುಭವ ಅವಿಸ್ಮರಣೀಯ. ನಮ್ಮಂತ ಕಿರಿಯರಿಗೆ ಸಾಕಷ್ಟು ಅನುಭ ನೀಡಿದರು ಎಂದು‌ ಸಂಸದ ಪ್ರಹ್ಲಾದ್ ‌ಜೋಶಿ ವಾಜಪೇಯಿ ಅವರ ಜೊತೆಗಿನ ಸಂಬಂಧವನ್ನು ಮೆಲಕು ಹಾಕಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ನಾನು ಮೊದಲ ‌ಬಾರಿ ಸಂಸತಿನಲ್ಲಿ ಮಾತನಾಡಿದಾಗ ಎಲ್ಲರಿಗೂ ಮಾತಿನ ಕಲೆ ಇರುವದಿಲ್ಲ. ಮಾತನಾಡುತ್ತ ಹೊದಂತೆ ಮಾತಿಗಾರಿಕೆ ಬರುತ್ತದೆ ಎಂದು ಹುರಿದುಂಬಿಸಿದರು. ಅವರ ಮಾತು ನನಗೆ‌ ಇಂದುಗೂ ಸ್ಪೂರ್ತಿದಾಯಕವಾಗಿದೆ ‘ ಎಂದರು.

‘ ಅವರು ತಮ್ಮ ಕಳೆದ ಜೀವಿತಾವಧಿಯಲ್ಲಿ ಎರಡು‌ ಮೂರು ಸಾರಿ ಹುಬ್ಬಳ್ಳಿಗೆ ಬಂದಾಗ ವೇದಿಕೆ ಹಂಚಿಕೊಂಡಿದ್ದು, ಅಳಿಸಲಾಗದ ನೆನಪು. ಅವರು ಆರೋಗ್ಯ ಸುಧಾರಿಸಿಲ್ಲಿ ಎಂದು ಪ್ರಾರ್ಥಿಸುತ್ತೆನೆ ಎಂದವರು, ಅರೋಗ್ಯವಂತರಾಗಿ ಬಂದು ‌ನಮ್ಮಂತವರಿಗೆ ಮಾರ್ಗದರ್ಶನ‌ ಮಾಡಲಿ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com