Sandalwood : ತಾಯಿಯಾದ ಅನು ಪ್ರಭಾಕರ್, ಸಂತಸದಲ್ಲಿ ರಘು ಮುಖರ್ಜಿ !

ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ಸ್ವಾತಂತ್ರ್ಯ ದಿನಾಚರಣೆಯಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ರಘು ಮುಖರ್ಜಿ ಅವರು ಈ ಕುರಿತು ಫೋಟೋವನ್ನ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಮಗು ಹಾಗೂ ಅನು ಪ್ರಭಾಕರ್ ಇಬ್ಬರು ಆರೋಗ್ಯವಾಗಿದ್ದು, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ರಘು ಅವರ ಪೋಸ್ಟ್ ಹಲವು ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲ ಅಭಿಮಾನಿಗಳು ಮಗುವಿನ ಫೋಟೋ ನಿರೀಕ್ಷೆಯಲ್ಲಿದ್ದೇವೆ ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ಕೆಲ ದಿನಗಳ ಹಿಂದಷ್ಟೆ ಅನು ಪ್ರಭಾಕರ್‌ ಗೆ ಯಾವಾಗ ಮಗು ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಅನು ಇದೇ ತಿಂಗಳಲ್ಲಿ ಎಂದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com