ಕೇರಳ : ದಿನೇ ದಿನೇ ಹೆಚ್ಚುತ್ತಿರುವ ವರುಣನ ಆರ್ಭಟ : ಸಾವಿನ ಸಂಖ್ಯೆ 47ಕ್ಕೆ ಏರಿಕೆ…!

ತಮಿಳು ನಾಡು : ಕಳೆದ ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ದೇವರನಾಡು ಅಕ್ಷರಸಃ ನಲುಗಿಹೋಗಿದೆ. ಸಾವಿನ ಸಂಖ್ಯೆ 47ಕ್ಕೆ ಏರಿದ್ದು, 8ಜಿಲ್ಲೆಗಳಿಗೆ ರೆಡ್​  ಅಲರ್ಟ್​ ಘೋಷಿಸಿದೆ.

ಇಡುಕ್ಕಿ, ಮಲಪ್ಪುರಂ, ಕಂಜೂರ್, ಎರ್ನಾಕುಲಂ, ಕಲ್ಲಿಕೋಟೆ ಸೇರಿದಂತೆ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಿರುವಂತಪುರಂನಲ್ಲಿ ಬಿಟ್ಟುಬಿಡದೇ ಮಳೆ ಸುರಿಯುತ್ತಿದ್ದು ಇಡುಕ್ಕಿ ಜಲಾಶಯದ 5ಗೇಟ್​ಗಳನ್ನು ತೆರೆಯಲಾಗಿದ್ದು, ಶಬರಿ ಮಲೆ ಯಾತ್ರೆಯನ್ನು ನಿಷೇದಿಸಲಾಗಿದೆ. ಮಹಾಮಳೆಗೆ 40ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಇನ್ನೂ 5ದಿನಗಳ ಕಾರಲ ಹೀಗೆ ಮಳೆಯಾಗುತ್ತದೆ ಎಂದು ತಿಳಿದುಬಂದಿದೆ.

ಕೇರಳದಲ್ಲಿ ವರುಣ ಅಬ್ಬರಕ್ಕೆ ಜನರು ನೀರಿನಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಉಂಟಾಗಿದ್ದು, ಪ್ರವಾಹದಲ್ಲಿ ಸಿಲುಕಿದ 17, 974 ಜನರನ್ನು ನಿರಾಶ್ರಿತ  ತಾಣಕ್ಕೆ  ಸ್ಥಳಾಂತರಿಸಲಾಗಿದೆ. ವಿಮಾನ ನಿಲ್ದಾಣವನ್ನೂ ನಾಲ್ಕು ದಿನಗಳ ಕಾಲ ಮುಚ್ಚಲಾಗಿದ್ದು, ಇನ್ನು ಮಳೆಯಿಂದಾಗಿ ವಿಮಾನ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

ಈ ಶತಮಾನದಲ್ಲೇ ಅತ್ಯಂತ ಹೆಚ್ಚು ಮಳೆ ಕೇರಳದಲ್ಲಿ ಸುರಿಯುತ್ತಿದೆ.  ಕೇರಳದ ಸಂಪೂರ್ಣ ಆಡಳಿತ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು,  ಐಎಎಸ್ ಅಧಿಕಾರಿಯೊಬ್ಬರು ನಿರಾಶ್ರಿತರ ಸಹಾಯಕ್ಕೆ ನಿಂತಿದ್ದು ದೇಶಾದ್ಯಂತ ಸುದ್ದಿಯಾಗುತ್ತಿದೆ.  ಇಲ್ಲಿನ ರಿಲೀಫ್ ಕ್ಯಾಂಪ್ ಗಳಿಗೆ ಆಹಾರ ಸಾಮಾಗ್ರಿಗಳ ಪೂರೈಕೆ ಮಾಡುವ ವೇಳೆ   ಐಎಎಸ್ ಅಧಿಕಾರಿ ಜಿ. ರಾಜಾಮಾಣಿಕ್ಯಮ್ ಮತ್ತು ಸಬ್ ಕಲೆಕ್ಟರ್  ಉಮೇಶ್ ಸ್ವತಃ  ಅಕ್ಕಿ ಮೂಟೆಗಳಿಗೆ ಹೆಗಲು ಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ

 

Leave a Reply

Your email address will not be published.