ಕುಮಾರಸ್ವಾಮಿ ರಾಜ್ಯದ 42 ದೇವಸ್ಥಾನಗಳಿಗೆ ಹೋಗಿದ್ದರಿಂದಲೇ ಮಳೆ ಚೆನ್ನಾಗಿ ಆಗ್ತಿದೆ : ರೇವಣ್ಣ

‘ ಹೆಚ್.ಡಿ.ಕುಮಾರಸ್ವಾಮಿ ಯವರು ರಾಜ್ಯದ 42 ದೇವಸ್ಥಾನಕ್ಕೆ ಹೋಗಿದ್ದರಿಂದಲೇ ಮಳೆ ಚೆನ್ನಾಗಿ ಆಗುತ್ತಿದೆ. ಬೆಳೆಯೂ ಉತ್ತಮವಾಗಿ ಬರುತ್ತದೆ ‘ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

‘ ಶ್ರಾವಣಮಾಸದ ಮೊದಲ ಸೋಮವಾರ ನಮ್ಮ ಕುಲದೇವರ ದೇವಸ್ಥಾನಕ್ಕೆ ಹೋಗಿ ಬರುವುದು ಸಂಪ್ರದಾಯ ತಪ್ಪೇನು.? ಹಿಂದೆ ಯಡಿಯೂರಪ್ಪ ಎಷ್ಟು ದೇವಸ್ಥಾನಕ್ಕೆ ಹೋಗಿರಲಿಲ್ಲ. ವೈಷ್ಣೋದೇವಿಗೆ ಹೋಗಿರಲಿಲ್ಲವೇ..? ನಾವೇನು ಉತ್ತರ ಭಾರತದ ದೇವಸ್ಥಾನಗಳಿಗೆ ಹೋಗುತ್ತಿಲ್ಲ. ನಮ್ಮ ರಾಜ್ಯದ ದೇವಸ್ಥಾನಗಳಿಗೆ ಮಾತ್ರ ಹೋಗುತ್ತಿದ್ದೇವೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com