ಟಾಲಿವುಡ್​ ರಂಭೆಗೆ ಸೀಮಂತ ಸಂಭ್ರಮ, ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ : ಫೋಟೋ ವೈರಲ್​

ಟಾಲಿವುಡ್​ನ ರಂಭೆಗೆ ಇಂದು ಸೀಮಂತ ಶಾಸ್ತ್ರ ನೆರೆವೆರಿದ್ದು, ಬಹುಭಾಷಾ ನಟಿ ರಂಭಾ ತಮ್ಮ ಮೂರನೇ ಮಗುವೆಗೆ ಜನ್ಮ ನೀಡುವ ಖುಷಿಯಲ್ಲಿದ್ದಾರೆ, ರಂಭಾ ಅವರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಸೀಮಂತ ಶಾಸ್ತ್ರ ಮಾಡಲಾಯಿದ್ದು, ಈ ಸಂತಸದ ಕ್ಷಣದ ಫೋಟೋಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

.

#rambhababy #baby #babyshower #rambhababyshower

A post shared by RambhaIndrakumar💕 (@rambhaindran_) on

ಡ್ಯಾನ್ಸ್ ಮಾಡಿ ಗಮನ ಸೆಳೆದ ನಟಿ

 

ಗರ್ಭೀಣಿಯಾಗಿದ್ದರೂ ಸಂಬಂಧಿಕರ ಜೊತೆಯಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ್ದರು, ರಂಭಾ ತೆರೆಯಿಂದ ಮರೆಯಾಗಿ ವರ್ಷಗಳ ಕಾಲ ಆಗಿದೆ. ರಂಭಾ ಅವರ ನಟನೆ, ಡ್ಯಾನ್ಸ್ ಎಲ್ಲವನ್ನ ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರಂಭಾ ಅವರ ಈ ಫೋಟೋಗಳು ಅವರ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ

ಉದ್ಯಮಿ ಇಂದ್ರಕುಮಾರ್ ಪತ್ಮನಾಥನ್ ಅವರನ್ನು ರಂಭಾ 2010ರಲ್ಲಿ ಮದುವೆಯಾಗಿದ್ದರು. ಈಗಾಗಲೇ ಅವರಿಗೆ ಲಾನ್ಯ ಹಾಗೂ ಸಾಶಾ ಹೆಣ್ಣು ಮಕ್ಕಳಿದ್ದು, ಈಗ ಮೂರನೇ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ. ಸದ್ಯ ರಂಭಾ ತನ್ನ ಪತಿ ಹಾಗೂ ಮಕ್ಕಳ ಜೊತೆ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.

#rambhababy #baby #babyshower #rambhababyshower

A post shared by RambhaIndrakumar💕 (@rambhaindran_) on

ಟೋರೋಂಟಾದಲ್ಲಿರುವ ತಮ್ಮ ನಿವಾಸದಲ್ಲಿ ರಂಭಾ ಅವರು ಸೀಮಂತ ಕಾರ್ಯಕ್ರಮ ಸಂಪ್ರದಾಯವಾಗಿ, ಅದ್ದೂರಿಯಾಗಿ ನಡೆದಿದೆ. ಈ ಫೋಟೋಗಳನ್ನು ಖುದ್ದು ರಂಭಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಗಂಡ-ಮಕ್ಕಳು ಹಾಗೂ ಬಂಧು-ಬಳಗದವರು ಈ ಕಾಯಕ್ರಮದಲ್ಲಿ ಭಾಗಿಯಾಗಿದ್ದರು.

ರಂಭಾ ಮುದ್ದು ಸಂಸಾರ

Leave a Reply

Your email address will not be published.