ಮಹದಾಯಿ ತೀರ್ಪು ಭಾಗಶಃ ನೆಮ್ಮದಿ ತಂದಿದೆ : ಮಾಜಿ ಸಚಿವ ಎಂ.ಬಿ ಪಾಟೀಲ್

‘ ಮಹದಾಯಿ ತೀರ್ಪು ಭಾಗಶಃ ನೆಮ್ಮದಿ ತಂದಿದೆ ‘ ಎಂದು ವಿಜಯಪುರದಲ್ಲಿ‌ ಮಾಜಿ‌ ಸಚಿವ ಎಂಬಿ‌ ಪಾಟೀಲ್ ಹೇಳಿಕೆ ನೀಡಿದ್ದಾರೆ.  ಮಲಫ್ರಭಾ ೨೩ ಟಿ.ಎಂ ಸಿ ಗಿಂತ ನೀರು ತುಂಬಿಲ್ಲ. ಖಾನಾಪುರ ಭಾಗದಲ್ಲಿ ಪರಿಸ್ಥಿತಿ ಸರಿ ಇಲ್ಲ. ಖಾನಾಪುರ ಭಾಗಕ್ಕೆ ನೀರು ಹರಿಸಲೇಬೇಕು. ನೀರು ಬಿಟ್ರೆ ಆ ಭಾಗಕ್ಕೆ ನೀರಾವರಿ ಹಾಗು ಕರೆಗಳಿಗೆ ನೀರು ತುಂಬಿಸಬಹುದು, ಈಗ ಬಂದಿರುವ ತೀರ್ಪಿನಿಂದ ಜಲವಿದ್ಯುತ್ ಗೆ ಸಮಸ್ಯೆ ಆಗಲ್ಲ ‘ ಎಂದಿದ್ದಾರೆ.

ಡಿಕೆಶಿ ಕರಾಳ ದಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ‘ ಡಿಕೆಶಿ ಜಲಸಂಪನ್ಮೂಲ ಸಚಿವರು ಆಗಿರುವುದರಿಂದ ಅದು ಅವರ ಪ್ರತಿಕ್ರಿಯೆ. ನಾನು ಜಲ ಸಂಪನ್ಮೂಲ ಸಚಿವನಿದ್ದಾಗ ಕೃಷಿಗೆ ಸಮಸ್ಯೆ ಇದೆ ಅಂತಾ ಏಳು ಟಿ.ಎಂ.ಸಿ ನೀರು ಕೇಳಿದ್ವಿ. ಮುಂದಿನ ಹೋರಾಟದ ಬಗ್ಗೆ ರಾಜ್ಯ ಸರ್ಕಾರ‌ಕ ಕ್ರಮ ಕೈಗೊಳ್ಳುತ್ತೆ. ಸಂಪುಟ ವಿಸ್ತರಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ ‘ ಎಂದು ವಿಜಯಪುರದಲ್ಲಿ ಎಂ.ಬಿ‌ ಪಾಟೀಲ್ ಹೇಳಿಕೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com