ಗಣರಾಜ್ಯೋತ್ಸವಕ್ಕೆ ತೆರೆ ಕಾಣಲಿದೆ ಝಾನ್ಸಿ ರಾಣಿಯ ಕಥೆ : ಇಂದು ಚಿತ್ರದ ಫಸ್ಟ್ ಲುಕ್ ಔಟ್…!

ಸ್ವಾತಂತ್ರ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಜೀವನ ಕಥೆ ತೆರೆ ಮೇಲೆ ಬರಲು ತಯಾರಾಗುತ್ತಿರುವ  ‘ಮಣಿಕರ್ಣಿಕಾ’ ಸಿನಿಮಾದ ಮೊದಲ ಪೋಸ್ಟರನ್ನು ಸ್ವಾತಂತ್ರ್ಯೋತ್ಸವ ದಿನವಾದ ಇಂದು ರಿಲೀಸ್​ ಮಾಡಿದ್ದಾರೆ. ​

ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಸ್ವಾತ್ರಂತ್ರ ದೊರಕಿಸಲು ಏನೆಲ್ಲ ಸಾಹಸ ಮಾಡಿದ್ದರು, ಮಹಿಳೆಯಾಗಿ ಬ್ರಿಟಿಷ್​ರನ್ನು ಹೇಗೆ ಬಗ್ಗು ಬಡೆಯುತ್ತಿದ್ದಲೂ, ಹಾಗೂ ಅವರಿಗಿರುವ  ದೇಶಭಕ್ತಿ ಬಗ್ಗೆ ಸಾರುವ ಸಿನಿಮಾ ‘ಮಣಿಕರ್ಣಿಕಾ’ ಈ ಸಿನಿಮಾದ ಪೋಸ್ಟರ್​ ಈಗಾಗಲೇ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದು, ಗಣರಾಜ್ಯೋತ್ಸವಕ್ಕೆ ಸಿನಿಮಾ ತೆರೆ ಕಾಣಲಿದೆ ಎಂದು ತಿಳಿದುಬಂದಿದೆ.

Image result for manikarnika

ಬಾಲಿವುಡ್​ ನಟಿ ಕಂಗನಾ ರಣಾವತ್​ ಈ ಸಿನಿಮಾದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣದ ಆರಂಭದ ದಿನದಿಂದಲೂ ಸಾಕಷ್ಟು ಸುದ್ದಿಯಾಗಿದ್ದ ಈ ಸಿನಿಮಾ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ತನ್ನ ದತ್ತುಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು, ಖಡ್ಗ ಹಿಡಿದು ಯುದ್ಧ ಮಾಡುತ್ತಿರುವ ಲಕ್ಷ್ಮೀಬಾಯಿಯ ಲುಕ್​  ವೈರಲ್​ .

Leave a Reply

Your email address will not be published.

Social Media Auto Publish Powered By : XYZScripts.com