ಕೊಡಗು : ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ : ಹೊರ ಜಗತ್ತಿನ ಸಂಪರ್ಕ ಕಡಿತ

ಕೊಡಗು : ಭಾರೀ ಮಳೆಗೆ ಕೊಡಗಿನಲ್ಲಿ ಹೊರ ಜಗತ್ತಿನ ಸಂಪರ್ಕ ಕಡಿತಗೊಂಡಿದೆ. ಕ್ಷಣ ಕ್ಷಣಕ್ಕೂ ಹೆದ್ದಾರಿ ಮೇಲೆ ಗುಡ್ಡಗಳೂ ಕುಸಿಯುತ್ತಿವೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಹಾರಂಗಿ ಜಲಾಶಯದಿಂದ ಹೊರಬಿಟ್ಟ ನೀರಿನ ಎಫೆಕ್ಟ್ ನಿಂದಾಗಿ,  ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ ರಸ್ತೆ ಮೇಲೆ ನೀರು ಹರಿದಿದೆ.

ಹಾಸನ-ಕೊಡಗು ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದ್ದು, ಗುಡ್ಡದ ಮಣ್ಣು ಕುಸಿದು ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿಯೂ ಬಂದ್ ಆಗಿದೆ. ಮರ ಹಾಗೂ ಬರೆ ಕುಸಿದು ಸೋಮವಾರಪೇಟೆ-ಮಡಿಕೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಲಾವೃತಗೊಂಡಿರುವ ಹಿನ್ನೆಲೆ ಕಡಿತಗೊಂಡು ಗ್ರಾಮೀಣ ಪ್ರದೇಶದ ರಸ್ತೆಗಳು ಬ್ಲಾಕ್ ಆಗಿವೆ.

Leave a Reply

Your email address will not be published.

Social Media Auto Publish Powered By : XYZScripts.com