ರಾಯಚೂರು : ಸ್ವಾತಂತ್ರ ದಿನದಂದು ಕಪ್ಪು ಬಾವುಟ ಪ್ರದರ್ಶನ : ಟಿಎಲ್​ಬಿಸಿ ಕಾರ್ಮಿಕರ ಬಂಧನ

ರಾಯಚೂರು : ರಾಯಚೂರಿನಲ್ಲಿ ನಡೆದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ  ಕಪ್ಪು ಬಾವುಟ ಪ್ರದರ್ಶಿಸಿದ ತುಂಗಭದ್ರಾ ಹಂಗಾಮಿ ನೌಕರರನ್ನು  ಪೊಲೀಸರು ಬಂಧಿಸಿದ್ದಾರೆ. ಹೊರಗುತ್ತಿಗೆ ಪದ್ಧತಿ ವಿರೋಧಿಸಿ ಧರಣಿ ನಡೆಸುತ್ತಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು  ಕಪ್ಪು ಬಾವುಟ ಪ್ರದರ್ಶನಕ್ಕೆ ತೀರ್ಮಾನಿಸಿದ್ದರು ಎಂದು ತಿಳಿದುಬಂದಿದೆ..

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ  ರಾಯಚೂರಿನ ಟಿಪ್ಪು ಸುಲ್ತಾನ ಗಾರ್ಡನ್ ಕಾರ್ಮಿಕರು ಅನಿರ್ದಿಷ್ಟಾವದಿ ಧರಣಿ 37ನೇ ದಿನಕ್ಕೆ ಕಾಲಿಟ್ಟಿದ್ದರು ಸರ್ಕಾರ ಸ್ಪಂದಿಸಿಲ್ಲ,  ಈ ಹಿನ್ನೆಲೆಯಲ್ಲಿ ಇಂದು ಕಪ್ಪು ಬಾವುಟ ಪ್ರದರ್ಶನಕ್ಕೆ ತೀರ್ಮಾನಿಸಿದ್ದರು.  ಧ್ವಜಾರೋಹಣ ವೇಳೆ ಕಪ್ಪು ಬಾವುಟು ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದ ಧರಣಿ ನಿರತ 300ಕ್ಕೂ ಹೆಚ್ಚು ತುಂಗಭದ್ರಾ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

 

 

Leave a Reply

Your email address will not be published.