72ನೇ ಸ್ವಾತಂತ್ರ ದಿನಾಚರಣೆ : ಕೆಂಪುಕೋಟೆಯಲ್ಲಿ PM ಮೋದಿ ಭಾಷಣದ ಹೈಲೈಟ್ಸ್…!

ನವದೆಹಲಿ : ರಾಜ್ಯದೆಲ್ಲೆಡೆ 72ನೇ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿದ್ದು, ರಾಷ್ಟ ರಾಜದಾನಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಧ್ವಜಾರೋಹಣ ಮಾಡಿದ್ದಾರೆ. ನಂತರ ಮೋದಿ ಭಾಷಣ ಮಾಡಿದ್ದು ಕೆಂಪುಕೋಟೆಗೆ ಗಣ್ಯರು ಆಗಮಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ಧ್ವಜಾರೋಹಣದ ನಂತರ ಭಾಷಣ ಮಾಡಿದ ಪ್ರಧಾನಿ, ದೇಶವು ಹೊಸ ಕನಸುಗಳು ಮತ್ತು ಸಂಕಲ್ಪದೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ. ಭಾರತವು ಬಲಿಷ್ಠ ರಾಷ್ಟ್ರವಾಗುತ್ತಿದೆ. ಸಾಮಾಜಿಕ ನ್ಯಾಯದಾನ ವೃದ್ಧಿಯಾಗಿದೆ. ಒಬಿಸಿಗಳ ಹಕ್ಕು ರಕ್ಷಣೆಗೆ ಸಂಸತ್ತಿನಲ್ಲಿ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು. ಇದು ರೀಫಾರ್ಮ್‌, ಪರ್ಫಾರ್ಮ್‌, ಟ್ರಾನ್ಸ್‌ಫಾರ್ಮ್ ಸರಕಾರ ಎಂದು ಮೋದಿ ಹೇಳಿದ್ದರು.

Modi's Ayushman Bharat: 10 ಕೋಟಿ ಕುಟುಂಬಗಳಿಗೆ ವಿಮೆ ​ಕಲ್ಪಿಸುವ 'ಆಯುಷ್ಮಾನ್‌ ​ ಭಾರತ' ಘೋಷಿಸಿದ ಪಿಎಂ

ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಮಹಿಳೆಯರಿಗೆ ಆದ್ಯತೆ, ಗ್ರಾಮ ಪಂಚಾಯಿತಿಯಿಂದ ಸಂಸತ್ ವರೆಗೆ ಮಹಿಳೆಯರು ಅಧಿಕಾರ ನಡೆಸಬೇಕು,  ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರಾಕ್ಷಿಸಿ ಕೃತ್ಯಗಳನ್ನ ಸರ್ಕಾರ ಸಹಿಸುವುದಿಲ್ಲ. ರಾಜಸ್ಥಾನದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರನ್ನ ಶಿಕ್ಷೆ ನೀಡಲಾಗಿದೆ.  ಬಡವರಿಗೆ ನೀಡುವ ಅಕ್ಕಿ, ಗೋದಿಯಲ್ಲೂ ಗೋಲ್​ಮಾಲ್​ ನಡೆಯುತ್ತಿತ್ತು. ಇದಕ್ಕೆ ಬ್ರೇಕ್​ ಹಾಕಿದ್ದೇವೆ  ಭಾರತೀಯರ ಆತ್ಮವಿಶ್ವಾಸ ಹೆಚ್ಚಿದೆ. ದೊಡ್ಡ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿವೆ ಎಂದು ತಿಳಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com