ಕೊಡಗಿನ ಜನತೆ ಆತಂಕ ಪಡುವ ಅಗತ್ಯವಿಲ್ಲ, ಸರ್ಕಾರ ನಿಮ್ಮ ಜೊತೆ ಇದೆ : ಸಾ ರಾ ಮಹೇಶ್​

ಕೊಡಗು : ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೊಡಗಿಗೆ ಬೆಂಗಳೂರಿನಿಂದ ರಕ್ಷಣಾ ತಂಡ ಆಗಮಿಸಿದೆ ಕೊಡಗಿನ ಜನತೆ ಆತಂಕ ಪಡುವ ಅಗತ್ಯವಿಲ್ಲ, ಸರ್ಕಾರ ನಿಮ್ಮ ಜೊತೆ ಇದೆ  ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ ರಾ ಮಹೇಶ್​,  ಈಗಾಗಲೇ 30 ಜನರ ಎಸ್ ಡಿ ಆರ್ ಎಫ್ ತಂಡ ಕೊಡಗಿಗೆ ಬಂದಿಳಿದಿದೆ. ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಫೂಟ್ ವರ್ಕ್ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಕೊಡಗಿನ ಜನಪ್ರತಿಗಳೊಂದಿಗೆ ವಿಶೇಷ ಪ್ಯಾಕೇಜ್ ಗೆ ಸಿಎಂ ಬಳಿಗೆ ನಿಯೋಗ ತೆರಳಲಾಗುವುದು. ಕೊಡಗಿನ ಜನತೆ ಆತಂಕ ಪಡುವ ಅಗತ್ಯವಿಲ್ಲ, ಸರ್ಕಾರ ಜಿಲ್ಲೆಯ ಜನತೆಯ ಜೊತೆ ಇದೆ ಎಂದು ಹೇಳಿದ್ದರು.

ಇನ್ನು ಕೊಡಗಿನ ಕಾಫಿ, ಕಾಳುಮೆಣಸು, ಭತ್ತದ ಬೆಳೆ ಹಾನಿಗೆ ವಿಶೇಷ ಪರಿಹಾರ ನೀಡಲು ಚಿಂತನೆ  ನಡೆಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಶೇಷ ಪ್ಯಾಕೇಜ್, ಯೋಜನೆ ಬಗ್ಗೆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ರು.

Leave a Reply

Your email address will not be published.