ತುಮಕೂರು : ಮಸೀದಿ ಮೇಲೆ ಹಾರಿದ ತ್ರಿವರ್ಣ ಧ್ವಜ : ಮುಸ್ಲಿಂ ಬಾಂಧವರಿಂದ ಸ್ವತಂತ್ರ ದಿನಾಚರಣೆ

ತುಮಕೂರು : ಆಗಸ್ಟ್ 15 ಬುಧವಾರದಂದು ಭಾರತ ದೇಶಾದ್ಯಂತ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ತುಮಕೂರಿನ ಮಸೀದಿಯೊಂದರ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿದೆ. ತುಮಕೂರು ನಗರದ ಗೂಡ್ ಶೇಡ್ ಕಾಲೋನಿಯ ಮಸೀದಿಯಲ್ಲಿ ಸ್ವತಂತ್ರ್ಯೋತ್ಸವ ಆಚರಣೆ ಮಾಡಲಾಗಿದ್ದು, ಮುಸ್ಲಿಂ ಬಾಂಧವರು ಸಿಹಿ ಹಂಚಿ‌ ಸಂಭ್ರಮಿಸಿದ್ದಾರೆ.

ತುಮಕೂರು ನಗರದ ಗೂಡ್ ಶೆಡ್ ಕಾಲೋನಿಯ ಮಸೀದಿಯಲ್ಲಿ ಹಾರಿದ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಲಾಗಿದೆ. ಮುಸ್ಲಿಂ ಬಾಂಧವರಿಂದ ಧ್ವಜಾರೋಹಣ ನೆರವೇರಿದ್ದು, ಪುಟಾಣಿಗಳು ಸಾರೆ ಜಹಾಂಸೇ ಅಚ್ಛಾ… ಹಿಂದೂಸ್ತಾನ್ ಹಮಾರಾ ಗೀತೆಗಳನ್ನು ಹಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com