ದೆಹಲಿ : ಅಮಿತ್​ ಶಾ ಧ್ವಜಾರೋಹಣದ ವೇಳೆ ಎಡವಟ್ಟು : ಕಾಂಗ್ರೆಸ್​ ಪಕ್ಷದಿಂದ ವ್ಯಂಗ್ಯ….!

ದೆಹಲಿ : ಎಲ್ಲೆಡೆ 72ನೇ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿದ್ದು,  ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಧ್ವಜಾರೋಹಣ ನಡೆಸುವ ವೇಳೆ ಎಡವಟ್ಟು ಮಾಡಿದ್ದನ್ನು ಕಾಂಗ್ರೆಸನವರು ವ್ಯಂಗ್ಯ ಮಾಡಿದ್ದಾರೆ.

 

ಅಮಿತ್ ಶಾ ಅವರ ನೂತನ ಕಚೇರಿಯಲ್ಲಿ ಧ್ವಜಾರೋಹಣ ಮಾಡುತ್ತಿರುವಾಗ ಬಾವುಟ  ದಿಢೀರ್​ ಎಂದು ಕೆಳಗೆ ಬಿದ್ದಿದೆ. ಕೂಡಲೇ  ಅಮಿತ್​ ಶಾ ಧ್ವಜದ ದಾರ ಎಳೆದು ಧ್ವಜಾರೋಹಣವನ್ನು ಪೂರ್ಣಗೊಳಿಸಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ದೇಶದ ಧ್ವಜ ಹಾರಿಸಲು ಆಗದವರು ಹೇಗೆ ದೇಶವನ್ನ ನಿಭಾಯಿಸುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್​ ಪಕ್ಷದ ಟ್ವೀಟ್​,  ದೇಶದ ಧ್ವಜವನ್ನು ನಿಭಾಯಿಸಲು ಬಾರದವರು ದೇಶವನ್ನ ಹೇಗೆ ನಿಭಾಯಿಸುತ್ತಾರೆ.  50 ವರ್ಷಗಳಿಂದ ದೇಶದ ಬಾವುಟವನ್ನು ತಿರಸ್ಕಾರ ಮಾಡಿದ್ದವರು ಇಂದು ಧ್ವಜ ಹಾರಿಸದೇ ಇದ್ದರೆ,  ಇಂದು ನಮ್ಮ ರಾಷ್ಟ್ರ ಧ್ವಜಕ್ಕೆ ಈ ರೀತಿಯ ಅಪಮಾನ ಆಗುತ್ತಿರಲಿಲ್ಲ. ಬೇರೆಯವರಿಗೆ ದೇಶಭಕ್ತಿಯ ಸರ್ಟಿಫಿಕೇಟ್ ನೀಡೋರಿಗೆ ರಾಷ್ಟ್ರಗೀತೆಯ ನಿಯಮಗಳ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಕಾಂಗ್ರೆಸ್ ಟ್ವೀಟ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿ  ವ್ಯಂಗ್ಯ ಮಾಡಿದ್ದಾರೆ.

 

 

 

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com