ಕೊಪ್ಪಳ : ಯುವಕರಿಂದ ದೇಶದ್ರೋಹ – ವಾಟ್ಸಪ್ ಗ್ರೂಪ್ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಪೋಸ್ಟ್

ಕೊಪ್ಪಳ‌ : ಭಾರತ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಯುವಕರಿಂದ ದೇಶ ದ್ರೋಹ ಕೃತ್ಯ ಬೆಳಕಿಗೆ ಬಂದಿದೆ. ವಾಟ್ಸ್ ಆಪ್ ಗ್ರೂಪ್ನ ಲ್ಲಿ ಪಾಕಿಸ್ತಾನ ಜಿಂದಬಾದ್ ಎಂದು ಪೋಸ್ಟ್ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಭಟ್ಟರ ನರಸಾಪೂರ ಗ್ರಾಮದ ಯುವಕರಿಂದ ಕೃತ್ಯ ನಡೆದಿದೆ.

ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೆಸರಿನಲ್ಲಿರುವ ಗ್ರೂಪ್ ನಲ್ಲಿ ಶಬ್ಬೀರಸಾಬ್, ಚಾಂದಪಾಷ ಎನ್ನುವ ಯುವಕರು ಈ ಕೃತ್ಯ ಎಸಗಿದ್ದಾರೆ. IAAS ಫ್ಯಾನ್ಸ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಪೊಸ್ಟ್ ಮಾಡಿ ಯುವಕರು ನಾಪತ್ತೆಯಾಗಿದ್ದಾರೆ.

ಪೋಸ್ಟ್ ಮಾಡಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಯುವಕರ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com