ಮೋದಿ ಭ್ರಷ್ಟಚಾರದಲ್ಲಿ ಭಾಗಿಯಾಗಿಲ್ಲ,ಇದ್ದರೆ ಸಾಬೀತು ಮಾಡಿ : ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲ್

ಚಿತ್ರದುರ್ಗ : ಮೋದಿ ಬಗ್ಗೆ ಟೀಕೆ ಮಾಡಿದ್ರೆ ದೊಡ್ಡವನಾಗುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾನೆ, ದಿನ ದಿನಕ್ಕೆ ಭಗವಂತ ನಿನಗೆ ಕುಸಿಯುವಂತೆ ಮಾಡುತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಏಕವಚನದಲ್ಲಿ  ವಾಗ್ದಾಳಿ ನಡೆಸಿದ್ದರು.

ಮೋದಿ ಜೀ ಬಗ್ಗೆ ಅವಹೇಳನ ಕಾರಿ ಶಬ್ದ ಬಳಸುವುದು, ಅಸಹ್ಯ ಪದ ಬಳಕೆ ಮಾಡುತ್ತಿದ್ದಾರೆ, ಮೋದಿ ಬಗ್ಗೆ ಮಾತನಾಡುವಾಗ  ನಾಲಿಗೆ ಬಿಗಿ ಹಿಡಿದು ಮಾತನಾಡಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ನಿಮಗೆ ಬುದ್ದಿ ಬರುತ್ತೆ ಅಂದುಕೊಂಡಿದ್ದೆವು ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

sriramulu siddaramaiah fight ಗೆ ಚಿತ್ರದ ಫಲಿತಾಂಶ

ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಗಳು ಹಾಗೂ ಮಕ್ಕಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಭ್ರಷ್ಟಾಚಾರ ಜಾಸ್ತಿ ಆಗಿದ್ದರಿಂಲೇ ಅಧಿಕಾರದಿಂದ ಜನ ಕಾಂಗ್ರೆಸ್ ಪಕ್ಷವನ್ನ ದೂರು ಇಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ ಮೋದಿ, ಷಾ‌ ಪಾಲುದಾರರು ಎಂದು ಹೇಳುತ್ತಿದ್ದಿರಲ್ಲ,  ಮೋದಿ ಜೀ ನಾಲ್ಕು ವರ್ಷದ ಸರ್ಕಾರ ಒಂದೇ ಒಂದೇ ಭ್ರಷ್ಟಾಚಾರ ಭಾಗಿಯಾಗಿಲ್ಲ, ಇದ್ದರೆ ಸಿದ್ದರಾಮಯ್ಯ ಸಾಬೀತುಪಡಿಸಲಿ,  ಭ್ರಷ್ಟಾಚಾರದ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದು ಸಿದ್ದರಾಮಯ್ಯಗೆ ಸವಾಲ್ ಹಾಕಿದ್ದಾರೆ.

ಇನ್ನ ಸಿಎಂ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಶ್ರೀರಾಮುಲು,  ಭತ್ತನಾಟಿ ಆಗಲಿ ಯಾವುದೇ ಕಾರ್ಯಕ್ರಮಗಳಾಗಲಿ ಐದೇ ಜಿಲ್ಲೆಗೆ ಸೀಮಿತವಾಗಿದೆ,  ಭತ್ತನಾಟಿ, ಬಜೆಟ್, ಮುಖ್ಯಮಂತ್ರಿ ಕುಮಾರಸ್ವಾಮಿ  ಐದೇ ಜಿಲ್ಲೆಗಳಲ್ಲಿ ಮಾತ್ರ ಅಡ್ಡಾಡೋದು, ನಮ್ಮ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬರುವುದಿಲ್, ಭತ್ತ ನಮ್ಮ ಭಾಗದಲ್ಲೇ ಜಾಸ್ತಿ ಬೆಳೆಯುವುದು ಸಿಎಂ ಅವರೇ ನಮ್ಮ ಕಡೆನೂ ನೋಡಿ ಸ್ವಾಮಿ ಎಂದು ಶ್ರೀರಾಮು ಹೇಳಿಕೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com