ಜೆಡಿಎಸ್ ಅಂದ್ರೆ ದೇವೇಗೌಡರ ಕೃಪಾ ಪೋಷಿತ ನಾಟಕ ಮಂಡಳಿ : ಎಲ್.ಆರ್ ಶಿವರಾಮೇಗೌಡ

‘ ಜೆಡಿಎಸ್ ಎಂದರೆ ಹೆಚ್.ಡಿ.ದೇವೇಗೌಡರ ಕೃಪಾ ಪೋಷಿತ ನಾಟಕ ಮಂಡಳಿ ‘ ಎಂದು ಜೆಡಿಎಸ್ ವಕ್ತಾರ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಹೇಳಿಕೆ ನೀಡಿದ್ದಾರೆ. ನಾಗಮಂಗಲ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಎಲ್ ಆರ್ ಎಸ್ ಮಾತನಾಡಿದ್ದಾರೆ.

ದೇವೆಗೌಡರ ಕುಟುಂಬಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ದ ಲೋಕಸಭಾ ಚುನಾವಣೆಯಲ್ಲಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣಗೆ ಮಂಡ್ಯ ಕ್ಷೇತ್ರ ಆಯ್ಕೆ ಮಾಡುತ್ತಿರುವ ಬಗ್ಗೆ ಎಲ್ ಆರ್ ಎಸ್ ಪ್ರತಿಕ್ರಿಯಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಮಂಡ್ಯ ಕ್ಷೇತ್ರಕ್ಕೆ ಬರುವುದಾದರೆ ಪಕ್ಷದ ಸಾಮಾನ್ಯ ಕಾರ್ಯಕರ್ತರಾದಿಯಾಗಿ ಯಾರಿಗೂ ಅಸಮಾಧಾನವಿಲ್ಲ. ಒಂದು ವೇಳೆ ದೇವೇಗೌಡ್ರ ಕುಟುಂಬದಿಂದ ಯಾರೂ ಸ್ಪರ್ಧಿಸದಿದ್ರೆ ತಾವು ಸ್ಪರ್ಧಿಸೋ ಇಂಗಿತ ವ್ಯಕ್ತಪಡಿಸಿದ್ದಾರೆ. ನಾಗಮಂಗಲ ಪುರಸಭೆ ಮತ್ತು ಬೆಳ್ಳೂರು ಪಟ್ಟಣ ಪಂಚಾಯ್ತಿಗಳ ಮೀಸಲಾತಿಗಳ ವ್ಯತ್ಯಾಸದ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ.

‘ ಮೀಸಲಾತಿ ವ್ಯತ್ಯಾಸದಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮತ್ತು ಆಕ್ರೋಶ ಶಮನ ಮಾಡುವ ಶಕ್ತಿ ಪಕ್ಷಕ್ಕಿದೆ. ಪಟ್ಟಣ ಪಂಚಾಯ್ತಿ ಮತ್ತು ಪುರಸಭೆಗಳ ಅಧಿಕಾರದ ಚುಕ್ಕಾಣಿ ಜೆಡಿಎಸ್ ತೆಕ್ಕೆಗೆ ಶತಸಿದ್ದ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com