ಚೆನ್ನೈ : ದಿ. ಕರುಣಾನಿಧಿ ಮನೆಗೆ ಭೇಟಿ ನೀಡಿದ ಪುನೀತ್ ರಾಜಕುಮಾರ್…!

ಚೆನ್ನೈ : ತಮಿಳುನಾಡಿನ ಮಾಜಿ ಸಿಎಂ ದಿವಂಗತ ಕರುಣಾನಿಧಿ ಮನೆಗೆ ನಟ ಪುನೀತರಾಜ್ ಕುಮಾರ ಭೇಟಿ ನೀಡಿ, ಸಂತ್ವಾನ ಹೇಳಿದ್ದಾರೆ.

ಚೆನ್ನೈನ ಗೋಪಾಲಪುರಂದಲ್ಲಿರುವ ಕರುಣಾನಿಧಿ ಅವರ ಮನೆಗೆ ಭೇಟಿ ನೀಡಿದ ಪುನೀತ್ ಅವರ ಮನೆಯವರ ಜೊತೆ ಮಾತನಾಡಿ  ಕರುಣಾನಿಧಿ ಅವರ ಮಗ ಹಾಗೂ ಡಿಎಂಕೆ ನಾಯಕ ಸ್ಟಾಲಿನ್ ಅವರಿಗೆ ಧೈರ್ಯ ತುಂಬಿ, ಸಂತ್ವಾನ  ಹೇಳಿದ್ದರು.

ಮಾಧ್ಯಮದವರ ಜೊತೆ ಮಾತನಾಡಿದ ಪುನೀತ್​,  ಕರುಣಾನಿಧಿ ಒಬ್ಬರು ದಿಗ್ಗಜ ನಾಯಕ, ಅವರ ನಿಧನಕ್ಕೆ ಸಂತಾಪ ಸೂಚಿಸುವುದು ನನ್ನ ಕರ್ತವ್ಯ, ಹೀಗಾಗಿ  ನಾನು ಬಂದಿದ್ದೇನೆ, ಅಷ್ಟಲ್ಲದೇ  ತಮ್ಮ ತಂದೆ ರಾಜಕುಮಾರನ್ನು ವೀರಪ್ಪನ ಅಪಹರಿಸಿದ ವೇಳೆ ಕರುಣಾನಿಧಿಯವರು ತುಂಬಾ ಸಹಾಯ ಮಾಡಿದ್ದಾರೆ. ಅವರ ಹಾಗೂ ನಮ್ಮ ಕುಟುಂಬಕ್ಕೂ ಬಳ್ಳೆಯ ನಂಟಿದೆ, ಅವರ ಕುಟುಂಬಕ್ಕೆ ಸಂತ್ವಾನ ಸೂಚಿಸಿದೆ, ಎಂದು ಪುನೀತ್​ ತಿಳಿಸಿದ್ದರು.

ಆಗಸ್ಟ್ 7ರಂದು ಆಸ್ಪತ್ರೆಯಲ್ಲಿ  ಕರುಣಾನಿಧಿ ಇಹಲೋಕ ತ್ಯಜಿಸಿದ್ದರು, ಕರುಣಾನಿಧಿ ಸಾವಿಗೆ ರಾಜಕೀಯವಲ್ಲದೇ ಇಡೀ ಚಿತ್ರರಂಗವೂ ಕಂಬನಿ ಮಿಡಿದಿತ್ತು. ಕರುಣಾನಿಧಿ ಸುಮಾರು 60ಚಿತ್ರಗಳಿಗೆ ಕಥೆಯನ್ನು ಬರೆದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com