ಮರೀನಾ ಬೀಚ್​ನಲ್ಲಿ ತಂದೆಯವರ ಅಂತ್ಯಸಂಸ್ಕಾರ ನಡೆಯದಿದ್ದರೆ ನಾನೂ ಸಾಯುತ್ತಿದ್ದೆ : ಸ್ಟಾಲಿನ್ 

ತಮಿಳುನಾಡು :   ನನ್ನ ತಂದೆಯ ಶರೀರ ಮರಿನಾ ಬೀಚ್‌ ಬಳಿ ಮಣ್ಣಾಗದೇ ಹೋಗಿದ್ದರೆ, ನಾನೂ ಜೀವಂತವಾಗಿರುತ್ತಿರಲಿಲ್ಲ ಎಂದು ಹೇಳಿದ್ದರು  ಕರುಣಾನಿಧಿ ಪುತ್ರ ಸ್ಟಾಲಿನ್  ಹೇಳಿದ್ದಾರೆ.

 

ಕರುಣಾನಿಧಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಡಿಎಂಕೆ ಪಕ್ಷದ ಅಧ್ಯಕ್ಷ ಸ್ಟಾಲಿನ್,  ಮರಿನಾ ಬೀಚ್‌ನಲ್ಲಿ ತಂದೆಯವರ ಅಂತ್ಯಸಂಸ್ಕಾರದ ವಿಚಾರದಲ್ಲಿ ಸರಕಾರದೊಂದಿಗೆ ನಡೆದ ಕಾನೂನು ಸಮರದ ಬಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಹೇಳಿಕೊಂಡರು. ಈ ವೇಳೆ ಮರಿನಾ ಬೀಚ್‌ನಲ್ಲಿ ತಂದೆಯವರ ಅಂತ್ಯಸಂಸ್ಕಾರ ನಡೆಯದೇ ಹೋಗಿದ್ದಾರೆ ನಾನು ಜೀವಂತವಾಗಿರುತ್ತಿರಲಿಲ್ಲ ಎಂದು ಭಾವುಕರಾಗಿ ಹೇಳಿಕೊಂಡರು.  ಮರಿನಾ ಬೀಚ್‌ನಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಪಳನಿಸ್ವಾಮಿ ಅವರ ಕೈಹಿಡಿದು ಕೇಳಿಕೊಂಡೆ. ಆದರೆ ಅವರು, ಕಾನೂನು ಇದಕ್ಕೆ ಒಪ್ಪುವುದಿಲ್ಲ. ಈ ಸಂಬಂಧ ಈಗಾಗಲೇ ಕಾನೂನು ತಜ್ಞರ ಅಭಿಪ್ರಾಯವನ್ನೂ ಕೇಳಲಾಗಿದೆ ಎಂದು, ನಮ್ಮ ಮನವಿಯನ್ನು ತಿರಸ್ಕರಿಸಿದರು ಎಂದು ಹೇಳಿದ್ದರು.

Image result for M. K. Stalin

ಕರುಣಾನಿಧಿ ಸಾವಿನಿಂದ  ಇಡೀ ತಮಿಳುನಾಡು, ರಾಜಕೀಯ, ಸಿನಿಮಾರಂಗದಲ್ಲಿ ನೀರವಮೌನ ಆವರಿಸಿತು. ಕರುಣಾನಿಧಿಯ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್​ನಲ್ಲಿ ನಡೆಸಲು ಸರ್ಕಾರ ಕಾನೂನು ಸಮರವೇ ನಡೆಸಿತು. ಕೊನೆಗೆ  ಮರೀನಾ ಬೀಚ್​ನ  ಅಣ್ಣದೊರೈ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ದ್ರಾವಿಡ ಚಳುವಳಿ ನೇತಾರನ ಅಂತ್ಯಸಂಸ್ಕಾರ ನಡೆಯಿತು.

 

Leave a Reply

Your email address will not be published.

Social Media Auto Publish Powered By : XYZScripts.com