ಮಹದಾಯಿ ಹೈ ತೀರ್ಪು ಕನ್ನಡದ ಪರ : ಹೋರಾಟಗಾರರಲ್ಲಿ ಸಂಭ್ರಮಾಚರಣೆ….!

ಮಹದಾಯಿ ಹೋರಾಟ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇಂದು ನ್ಯಾಯಾಧೀಕರಣ ಮದ್ಯಂತರ ತೀರ್ಪು ರೈತರಲ್ಲಿ ಉತ್ಸಾಹ ತಂದಿದೆ. ಇದ್ರಿಂದ ಮಹದಾಯಿ ಹೋರಾಟದ ಕೇಂದ್ರ ಸ್ಥಳ ನರಗುಂದದಲ್ಲಿ ಸಂಭ್ರಮ ಮನೆ ಮಾಡಿತು.

ಇಂದು ಮಹದಾಯಿ ನ್ಯಾಯಾಧೀಕರಣ ತೀರ್ಪಿನಿಂದ ಗದಗ ಜಿಲ್ಲೆಯ ನರಗುಂದದಲ್ಲಿ ಕಂಡ ಬಂದ ದೃಶ್ಯ. ಕಳೆದ ಮೂರು ವರ್ಷದಿಂದ ಹತ್ತು ಹಲವು ಬಗೆಯ ಹೋರಾಟದ ಮೂಲಕ ಇಲ್ಲಿನ ಹೋರಾಟಗಾರರು ಗಮನ ಸೆಳೆದಿದ್ರು.  ಮಹದಾಯಿ ನೀರಿಗಾಗಿ ನಿರಂತರ  ಮೂರು ವರ್ಷದ ಹೋರಾಟಕ್ಕೆ ಕೊನೆಗೆ ಪ್ರತಿಫಲ ಸಿಕ್ಕಿದಂತಾಗಿದೆ. ಮಹದಾಯಿ ಮದ್ಯಂತರ ತೀರ್ಪಿನಿಂದ ರೈತರು ಫುಲ್ ಖುಷ್ ಆಗಿದ್ದು  ನ್ಯಾಯಾಧೀಕರಣ ತೀರ್ಪಿನಿಂದ ಹೋರಾಟದ ಸ್ಥಳದಲ್ಲಿ ಎಲ್ಲಿಲ್ಲದ ಸಂಭ್ರಮ ವಾತಾವರಣ ಸೃಷ್ಟಿಯಾಗಿದೆ.

ಮಹದಾಯಿ ತೀರ್ಪಿನಿಂದ ದಿಲ್ ಖುಷ್ ಆದ ಹೋರಾಟಗಾರರು ಪರಸ್ಪರ ಸಿಹಿ ಹಂಚಿ, ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ನರಗುಂದ ಮಹದಾಯಿ ಹೋರಾಟ ವೇದಿಕೆ ಎದುರಿಗೆ ಜಮಾಯಿಸಿದ ನೂರಾರು ರೈತ ಹೋರಾಟಗಾರರು ತೀರ್ಪಿನ ಪರ ಘೋಷಣೆ ಕೂಗಿ ಸಂತಸ ಪಟ್ಟರು. ವಿಜಯಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಇನ್ನು ತೀರ್ಪಿನಿಂದ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್  ಒದಗಿಸಲಾಗಿತ್ತು.

ಮಹದಾಯಿ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ 4 ಟಿಎಂಸಿ ನೀರು ಅದರಲ್ಲೂ ಹುಬ್ಬಳ್ಳಿ-ಧಾರವಾಡಕ್ಕೆ 4 ಟಿಎಂಸಿ ನೀರು, ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ನೀರು ಹಾಗೂ ಕರ್ನಾಟಕಕ್ಕೆ 5.5 ಟಿಎಂಸಿ ನೀರು ಹಂಚಿದ್ದು, ಇದರಲ್ಲಿ ಮಹದಾಯಿ ನದಿ ಪಾತ್ರದಲ್ಲಿ 1.5 ಟಿಎಂಸಿ ಬಳಕೆಗೆ ಅನುಮತಿ ನೀಡಲಾಗಿದೆ. ಮಲಪ್ರಭಾ ಜಲಾಶಯಕ್ಕೆ 4 ಟಿಎಂಸಿ ನೀರು ಹರಿಸಲು ಸೂಚನೆ ಕೂಡ ತೀರ್ಪಿನಲ್ಲಿ ಸೂಚಿಸಲಾಗಿದೆ. 8.02 ಟಿಎಂಸಿ ನೀರನ್ನು ಜಲವಿದ್ಯುತ್ ಯೋಜನೆಗೆ ಬಳಸಲು ಅನುಮತಿ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ರಾಜ್ಯಕ್ಕೆ ಸಿಕ್ಕಿರುವುದು 17.7 ಟಿಎಂಸಿ ನೀರು. 1125 ದಿನಗಳ ನಿರಂತರ ಹೋರಾಟ ಫಲಪ್ರದವಾಗಿದ್ದು ಇದು ಮಹದಾಯಿ ಹೋರಾಟಗಾರರ ಹರ್ಷಕ್ಕೂ ಕಾರಣವಾಗಿದೆ ಎನ್ನಲಾಗಿದೆ.

ಏನೇ ಆಗಲಿ ಬಂಡಾಯದ ನಾಡಲ್ಲಿ ನೀರಿಗಾಗಿ ಮತ್ತೊಂದು ರೈತ ಬಂಡಾಯ ಆರಂಭವಾಗಿ ಮೂರು ವರ್ಷವಾಗಿತ್ತು. ತೀರ್ಪಿನಿಂದ ಕೊನೆಗೂ ಹೋರಾಟಗಾರರ ಮೂರು ವರ್ಷದ ಹೋರಾಟದ ಪಯಣ ಸುಖಾಂತ್ಯವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com