ಉತ್ತರ ಕರ್ನಾಟಕ ಹಿಂದುಳಿಯಲು ಜೆಡಿಎಸ್ – ಕಾಂಗ್ರೆಸ್ ಕಾರಣ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಜಗದೀಶ್ ಶೆಟ್ಟರ್ ‘ ಉತ್ತರ ಕರ್ನಾಟಕ, ಹಿಂದುಳಿಯಲು ಜೆಡಿಎಸ್ ಕಾಂಗ್ರೆಸ್ ಕಾರಣ ‘ ಎಂದಿದ್ದಾರೆ.

‘ ರಾಜ್ಯದಲ್ಲಿ ಅತೀಹೆಚ್ಚು ಆಳ್ವಿಕೆ ನಡೆಸಿದ್ದೇ ಅವರು. ಆದ್ರೇ, ಲಿಂಗಾಯುತ ಮುಖ್ಯಮಂತ್ರಿಯಾಗಿದ್ದಾರೆ ಅಂತ ಹೇಳಿ ದೇವೇಗೌಡರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಲಿಂಗಾಯತರು – ಒಕ್ಕಲಿಗರು ಅಂತ ಬೇರೆ ಮಾಡುವುದು ಸರಿಯಲ್ಲ, ಐದು ಜನ ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದು ಯಾವ ಪಕ್ಷದಿಂದ ದೇವೇಗೌಡರಿಗೆ ಗೊತ್ತಿಲ್ವಾ..? ‘ ಎಂದಿದ್ದಾರೆ.

‘ ಈ ದೇಶವನ್ನು ಹಾಳುಮಾಡಿದ್ದು ಕಾಂಗ್ರೆಸ್, ರಾಜ್ಯವನ್ನು ಹಾಳುಮಾಡಿದ್ದು ಕಾಂಗ್ರೆಸ್. ಈಗ ಅವರ ಜೊತೆ ಸೇರಿ ಸರ್ಕಾರ ನಡೆಸುತ್ತಿದ್ದೀರಿ ‘ ಎಂದರು. ಉತ್ತರ ಕರ್ನಾಟಕದ ಸಿಎಂ ಆಗಿ ಗುರುತಿಸಿಕೊಳ್ಳುತ್ತೇನೆ ಎಂಬ ಎಚ್.ಡಿಕೆ ಹೇಳಿಕೆ ವಿಚಾರ‌ವಾಗಿ ಮಾತನಾಡಿದ ಅವರು ‘ ಸಿಎಂ ಕೇವಲ ಹೇಳಿಕೆ ಮಾತ್ರ ನೀಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೈಗೆತ್ತಿಕೊಳ್ಳುತ್ತಿಲ್ಲ. ಬೆಳಗಾವಿ ಎರಡನೇ ರಾಜ್ಯದಾನಿ ಮಾಡುವುದಾಗಿ ಹೇಳಿದ್ದ ಸಿಎಂ. ಈಗ ಅಲ್ಲಿದ್ದ ಕೆ-ಶಿಪ್ ಕಚೇರಿಯನ್ನ ಹಾಸನಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ ‘ ಎಂದಿದ್ದಾರೆ.

‘ ಮಹದಾಯಿ ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ. ನಮ್ಮ ವಕೀಲರು ಸಮರ್ಥ ವಾದ ಮಂಡನೆ ಮಾಡಿದ್ದಾರೆ, ನಮಗೆ ವಿಶ್ವಾಸ ಇದೆ. ರಾಜ್ಯದ ಏರ್ ಶೋ ಸ್ಥಳಾಂತರ ಮಾಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕೇಂದ್ರ ರಕ್ಷಣಾ ಸಚಿವರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರಕಾರ ಜನರಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com