ಗಾಳಿ ಮಳೆಗೆ ಸರ್ಕಾರಿ ಶಾಲೆ ಕಟ್ಟಡ ಕುಸಿತ : ತಪ್ಪಿದ ಬಾರೀ ಅನಾಹುತ…!

ಚಿಕ್ಕಮಗಳೂರು : ವರುಣನ ಅಬ್ಬರದಿಂದ ಸರ್ಕಾರಿ ಶಾಲೆಯೊಂದು ಕುಸಿದು ಬಿದ್ದಿರುವ  ಘಟನೆ ಮೂಡಿಗೆರೆ ಸಮೀಪದ ‌ಜನ್ನಾಪುರದ ಚಿನ್ನಿಗ ಗ್ರಾಮದಲ್ಲಿ ನಡೆದಿದೆ.

ಆಶ್ಲೇಶ ಮಳೆಯ ಅವಾಂತರದಿಂದ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಬಿದ್ದಿದೆ. ನಾಳೆ ಸ್ವಾತಂತ್ರ ದಿನಾಚರಣೆಗೆ ಸಿದ್ದತೆ ಮಾಡುವಾಗ  ಗಾಳಿಯೊಂದಿಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಇದರಿಂದ ಕಟ್ಟಡ ಕುಸಿದಿದೆ ಎನ್ನಲಾಗಿದೆ..ಇನ್ನು ಒಂದು ವಾರದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದ ಕಾರಣ ಶಾಲೆಗಳಿಗೆ ರಜೆ ನೀಡಲಾಗಿತ್ತು ಹೀಗಾಗಿ ಬಾರೀ ಅನಾಹುತ ತಪ್ಪಿದೆ. ಶಾಲೆಯಲ್ಲಿದ್ದ ಕೊಠಡಿಗಳು ಸಂಪೂರ್ಣ ಜಖಂಗೊಂಡಿವೆ.

 

Leave a Reply

Your email address will not be published.

Social Media Auto Publish Powered By : XYZScripts.com