ವೈದ್ಯರೇ ಅಚ್ಚರಿ ಪಡುವಂತೆ ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ…!

ಗದಗ : ಪ್ರಪಂಚದಲ್ಲಿಯೇ ಅಪರೂಪದಲ್ಲಿ ಅಪರೂಪ ಎನಿಸಿದ ಮಗುವೊಂದು ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ತಡರಾತ್ರಿ ಜನಿಸಿದೆ.

ಎರಡು ಕಾಲು ಜೊತೆಗೂಡಿ ಒಂದೇ ಆಕಾರದಲ್ಲಿ ಜನಿಸುವ ಈ ಮಗುವನ್ನು ವೈಜ್ಞಾನಿಕವಾಗಿ ಸಿರೆನೊಮೆಲಿಯಾ ಎಂದು ಹೇಳಲಾಗುತ್ತದೆ.   ಈ ಮಕ್ಕಳು ಪ್ರಪಂಚದಲ್ಲಿ ತೀರಾ ವಿರಳವಾಗಿ ಕಾಣ ಸಿಗುತ್ತವೆ ಎಂದು ಹೇಳಲಾಗಿದೆ. ಈ ರೀತಿಯ ಮಗು ಹುಟ್ಟಿದ್ದನ್ನು ಕಂಡು ವೈದ್ಯರು ಕೂಡ ದಿಗ್ಭ್ರಮೆಗೊಂಡಿದ್ದು, ಮಗು ಬದುಕುವುದು ಕಷ್ಟ ಎಂದಿದ್ದಾರೆ. ಅದೇ ರೀತಿ ಜನಿಸಿದ ಮಗು ಎರಡು ಗಂಟೆಯೊಳಗೆ ಸಾವಿಗೀಡಾಗಿದ್ದು, ರಾತ್ರಿಯೇ ಪೋಷಕರು ಮಗುವಿನ ಅಂತ್ಯಸಂಸ್ಕಾರವನ್ನು ನೆರವೆರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com